ಮೇರ ದೇಶ್ ಹೈ ಮಹಾನ್ ವಿಡಿಯೋ ವಿವಾದ; ಸೆನ್ಸಾರ್ ಮಂಡಳಿ ಅಧ್ಯಕ್ಷ ನಿಹಲಾನಿ ತಲೆದಂಡ?

ಸೆನ್ಸಾರ್ ಮಂಡಳಿ ಅಧ್ಯಕ್ಷರಾದಾಗಲಿಂದಲು ವಿವಾದಗಳ ಕೇಂದ್ರವಾಗಿರುವ ಪಹ್ಲಜ್ ನಿಹಲಾನಿ ಅವರನ್ನು ಹೊರಹಾಕಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು
'ಮೇರ ದೇಶ್ ಹೈ ಮಹಾನ್' ವಿಡಿಯೋದ ದೃಶ್ಯ
'ಮೇರ ದೇಶ್ ಹೈ ಮಹಾನ್' ವಿಡಿಯೋದ ದೃಶ್ಯ

ನವದೆಹಲಿ: ಸೆನ್ಸಾರ್ ಮಂಡಳಿ ಅಧ್ಯಕ್ಷರಾದಾಗಲಿಂದಲು ವಿವಾದಗಳ ಕೇಂದ್ರವಾಗಿರುವ ಪಹ್ಲಜ್ ನಿಹಲಾನಿ ಅವರನ್ನು ಹೊರಹಾಕಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

'ಹರ್ ಹರ್ ಮೋದಿ' ಎಂಬ ಚುನಾವಣ ಪೂರ್ವ ಘೋಷಣೆ ಮತ್ತು ವಿಡಿಯೋ ಮಾಡಿ ಪ್ರಧಾನಿ ಅವರ ಆಪ್ತ ವಲಯಕ್ಕೆ ಸೇರಿದ್ದ ಪಹ್ಲಜ್ ಅವರನ್ನು ಜನವರಿಯಲ್ಲಿ ಸೆನ್ಸಾರ್ ಮಂಡಳಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಮೋದಿ ಅವರ ಗೌರವಪೂರ್ವಕವಾಗಿ ಇತ್ತೀಚೆಗಷ್ಟೇ ಇವರು ನಿರ್ಮಿಸಿದ್ದ 'ಮೇರ ದೇಶ್ ಹೈ ಮಹಾನ್' ಎಂಬ ವಿಡಿಯೋ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಕಾರಣವಾಗಿತ್ತು. ವಿದೇಶದ ಹಲವಾರು ತಾಣಗಳನ್ನು ವಿಡಿಯೋದಲ್ಲಿ ಸೇರಿಸಲಾಗಿತ್ತು, ಮತ್ತು ಇದು ಅತ್ಯಂತ ಕೆಟ್ಟ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಹಾಸ್ಯ ಮಾಡಿದ್ದರು.

ಅಲ್ಲದೆ ಇತ್ತೀಚೆಗಷ್ಟೇ ಬಾಂಡ್ ಸಿನೆಮಾ 'ಸ್ಪೆಕ್ಟ್ರಾ'ದಲ್ಲಿ ಚುಂಬನದ ದೃಶ್ಯಕ್ಕೆ ಕತ್ತರಿ ಹಾಕಿ ಮತ್ತೊಂದು ವಿವಾದಕ್ಕೆ ಈಡಾಗಿದ್ದ ನಿಹಲಾನಿ, ಟಿ ವಿ ವಾಹಿನಿಯೊಂದರ ಸಂದರ್ಶನದಲ್ಲಿ ಸಿನೆಮಾವನ್ನು ನೋಡಿಲ್ಲ ಆದರೆ ಚುಂಬನ ದೃಶ್ಯಕ್ಕೆ ಕತ್ತರ ಹಾಕಿದ್ದರಿಂದ ಖುಷಿಯಾಗಿದೆ ಎಂದು ಒಪ್ಪಿಕೊಂಡಿದ್ದರು. ಸೆನ್ಸಾರ್ ಮಂಡಲಿಯ ಸಂಸ್ಕಾರಿ ನಾನು ಎಂದು ಸ್ವಯಂ ಘೋಷಿಸಿಕೊಂಡಿದ್ದರು. ಬಾಂಡ್ ಕೂಡ ಸಂಕ್ಸಾರಿ ಬಾಂಡ್ ಬದಲಾಗಬೇಕು ಎಂದು ಜನರು ಹಾಸ್ಯಗೈದಿದ್ದರು.

ಈ ವಿವಾದಗಳಿಂದ ಮುಜುಗರಕ್ಕೀಡಾಗಿರುವ ಕೇಂದ್ರ ಸರ್ಕಾರ ಪಹ್ಲಜ್ ನಿಹಲಾನಿ ಅವರನ್ನು ಕೆಲಸದಿಂದ ಮುಕ್ತಗೊಳಿಸುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಯಾವುದೇ ಕ್ಷಣದಲ್ಲಿ ಮಾಹಿತಿ ಪ್ರಸಾರ ಸಚಿವಾಲಯ ಹೊಸ ಅಧ್ಯಕ್ಷನನ್ನು ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com