ಎಲ್ಲರ ದನಿ ಆಲಿಸಿದರೆ ಮಾತ್ರ ಹೆಚ್ಚಿನ ಸಾಧನೆ

ರಾಜಕೀಯವೂ ಸೇರಿದಂತೆ ಜೀವನದಲ್ಲಿ ನೀವು ಏನನ್ನಾದರೂ ಸಾಧಿಸಬೇಕಾದರೆ ಬೇಕಾದರೆ ನಿಮ್ಮ ಸುತ್ತ ಮುತ್ತ ಇರುವ ಜನರ ದನಿಯನ್ನು...
ಬೆಂಗಳೂರಿನಲ್ಲಿ ಕಾಂಗ್ರೆಸ್  ಉಪಾಧ್ಯಕ್ಷ ರಾಹುಲ್ ಗಾಂಧಿ (ಕೃಪೆ : ಕೆಪಿಎನ್ )
ಬೆಂಗಳೂರಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಕೃಪೆ : ಕೆಪಿಎನ್ )
ಬೆಂಗಳೂರು: ``ರಾಜಕೀಯವೂ ಸೇರಿದಂತೆ ಜೀವನದಲ್ಲಿ ನೀವು ಏನನ್ನಾದರೂ ಸಾಧಿಸಬೇಕಾದರೆ  ಬೇಕಾದರೆ ನಿಮ್ಮ ಸುತ್ತ ಮುತ್ತ ಇರುವ ಜನರ ದನಿಯನ್ನು ಆಲಿಸುವುದನ್ನು ಕಲಿಯಬೇಕು''. ಹೀಗೆಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯರ ನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮುನ್ಸೂಚನೆ ನೀಡಿದ್ದಾರೆ. ಯಾರೊಂದಿಗೂ ಬೆರೆಯುವುದಿಲ್ಲ, ಅವರ ಮಾತು ಕೇಳುವುದಿಲ್ಲ  ಎಂಬ ಆರೋಪಗಳಿಗೆ ತಮ್ಮ ಮಾತಿನ ಮೂಲಕವೇ ಉತ್ತರ ನೀಡಿರುವ ಅವರು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರುವ ಮುನ್ಸೂಚನೆ ನೀಡಿದ್ದಾರೆ. ಆ ಬಳಿಕ ಪಕ್ಷದ ಹಿರಿಯ ಮತ್ತು ಕಿರಿಯರನ್ನು ಜತೆ ಜತೆಯಾಗಿ ತೆಗೆದುಕೊಂಡು  ತೆಗೆದುಕೊಂಡು ಹೋಗುವ ಸುಳಿವನ್ನೂ ನೀಡಿದ್ದಾರೆ.ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು  , ತಮ್ಮ ರಾಜಕೀಯ ಜೀವನವನ್ನು ಮೆಲಕು ಹಾಕಿದರು. ಜತೆ ಜತೆಗೇ ಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡ ಅವರು, ಬಡತನ ನಿವಾರಣೆಗೆ ಕಾಂಗ್ರೆಸ್‍ವೊಂದೇ ಮಾರ್ಗ ಎಂದರು. ``ಹತ್ತು ವರ್ಷದ ಹಿಂದೆ ರಾಜಕೀಯಕ್ಕೆ ಬಂದಾಗ, ಭಾರತದಲ್ಲಿನ ಸಮಸ್ಯೆಗಳು ತುಂಬಾ ಸರಳ ಅನ್ನಿಸಿದ್ದವು, ಆದರೆ ದಿನಕಳೆದಂತೆ ಇವು ಸುಲಭವಾದ ಸಮಸ್ಯೆಗಳಲ್ಲ ಎಂಬುದು ಅರಿವಾಗುತ್ತಾ ಹೋಯಿತು.
ಏಕೆಂದರೆ ನಾಯಕನಾದವ ಎಲ್ಲರ ಮಾತುಗಳನ್ನು ಆಲಿಸುವುದನ್ನು ಕಲಿಯಬೇಕು'' ಎಂಬುದು ಅವರ ಮಾತಾಗಿತ್ತು. ``ನನಗೆ ರಾಜಕೀಯ ಕಲಿಸಿದ್ದು ಜನರೇ, ರಾಜಕಾರಣಕ್ಕೆ ಕಾಲಿಟ್ಟ  ಮೇಲೆ ಜನರೊಂದಿಗೆ ಬೆರೆಯುತ್ತಾ ಹೋದೆ. ಇದಾದ ಬಳಿಕವೇ ದೇಶದ ಮುಂದಿರುವ ಸಮಸ್ಯೆಗಳನ್ನು ಅರಿಯುವುದು ಸಾಧ್ಯವಾಯಿತು.ಇದಷ್ಟೇ ಅಲ್ಲ, ಜೀವನದಲ್ಲಿ ನೀವು ಏನನ್ನಾದರೂ ಸಾ„ಸಬೇಕಾದರೆ,
ಜನರೊಂದಿಗೆ ಬೆರೆಯಬೇಕು, ಅವರ ಮಾತುಗಳನ್ನು ಆಲಿಸಬೇಕು, ಮತ್ತವರನ್ನು ಪ್ರಶಂಸಿಸಬೇಕು'' ಎಂದರು. ಇದೇ ವೇಳೆ ರಾಹುಲ್ ಗಾಂಧಿಯವರು, ಕೇಂದ್ರದಲ್ಲಿ ಮೋದಿ ಸರ್ಕಾರವೂ ಸೇರಿದಂತೆ ಬಹಳಷ್ಟು ವಿಚಾರಗಳ ಕುರಿತಂತೆ ಮಾತನಾಡಿದರು.  ಮಾತಿನ ಆರಂಭದಲ್ಲೇ ಮೌಂಟ್ ಕಾರ್ಮೆಲ್   ಕಾಲೇಜಿನ ಬಗ್ಗೆ ಮಾತನಾಡಿದ ಅವರು, ಅಲ್ಲಿ ಕಲಿತ ಮೂವರು ಮಹಾನ್ ಮಹಿಳೆಯರೊಂದಿಗೆ ಮಾತನಾಡಿ ಸಿದ್ಧತೆ ಮಾಡಿಕೊಂಡು ಬಂದಿ ದ್ದೇನೆ ಎಂದರು. ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಮಾತನಾಡಿದ ಅವರು, ಭಾರತೀಯನಾಗಿ ಇದರಿಂದ ತುಂಬಾ ನೊಂದಿರುವು ದಾಗಿ ಹೇಳಿದರು. ಅಲ್ಲದೆ ``ಜೀವಿಸಿ ಮತ್ತು ಜೀವಿಸಲು ಬಿಡಿ'' ಎಂಬುದೇ ಭಾರತದ ಬಹುಶಕ್ತಿಯುತ ಮಾತುಗಳು ಎಂದು ಹೇಳಿದರು. ಆಮೀರ್ ಖಾನ್ ಅವರ ಕುರಿತಂತೆ ಆಗಿರುವ ವಿವಾದ ಸಂಬಂಧ ಮಾತನಾಡಿದ ಅವರು, ಎದುರಾಳಿಗಳ ಮೇಲೆ ದಾಳಿ ನಡೆಸುವುದರಿಂದ  ಏನನ್ನೂ ಸಾಧಿಸಲಾಗದಸ ಜನರ ವಿರುದ್ಧ ದನಿ ಏರಿಸಿ ಮಾತನಾಡುವುದು ತುಂಬಾ ಸರಳ. ಆದರೆ ಬೇರೆಯವರ  ಮಾತುಗಳನ್ನು ಕೇಳುವುದು ಅತೀ ಮುಖ್ಯ ಎಂದರು.
ಜಿಎಸ್‍ಟಿಗೆ ನಾವು ತಡೆಯೊಡ್ಡಿಲ್ಲ: ಜಿಎಸ್‍ಟಿಗೆ ನಾವು ತಡೆಯೊಡ್ಡಿಲ್ಲ, ಇದನ್ನು ನಾವು ಸಂಪೂರ್ಣವಾಗಿ ನಂಬಿದ್ದೇನೆ ಎಂದು ಕಾಂಗ್ರೆಸ್  ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರವೇ ಪ್ರತಿಪಕ್ಷಗಳ ಬಳಿ ಮಾತನಾಡುತ್ತಿಲ್ಲ ಎಂದೂ ಅವರು ಆರೋಪಿಸಿದ್ದಾರೆ. ಎಲ್ಲ ಕಡೆಯಿಂದಲೂ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ``ಇದು ಸೂಟ್ ಬೂಟ್ ಸರ್ಕಾರಕ್ಕಿಂತಲೂ ಕೆಟ್ಟದಾಗಿದೆ''
ಎಂದು ಆಕ್ರೋಶ ವ್ಯಕ್ತ ಪಡಿಸಿದರು.  ಅಂದರೆ, ತೆರಿಗೆ ಮಿತಿ ವಿಚಾರ ಸೇರಿದಂತೆ ನಾವು ಎತ್ತಿರುವ ಆಕ್ಷೇಪಣೆಗಳ ಬಗ್ಗೆ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಮನವೊಲಿಕೆ ಮಾಡಲಿ. ಆಗ ನಾವೇ ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಜಿಎಸ್‍ಟಿಯಾಗಲಿ ಅಥವಾ ಇನ್ನಾವುದೇ ಮಸೂದೆಗಳಾಗಲಿ, ಅವೆಲ್ಲವೂ ಮಹತ್ವವಾಗಿರುವಂಥವೇ. ಆದರೆ ಯುಪಿಎ ಅಧಿಕಾರದಲ್ಲಿದ್ದಾಗ, ಎನ್ ಡಿಎ ಸರ್ಕಾರವೇ ಜಿಎಸ್ ಟಿ ಮಸೂದೆಯನ್ನು  ಸತತ ಮೂರು ವರ್ಷಗಳ ಕಾಲ ತಡೆಹಿಡಿದುಕೊಂಡಿತ್ತು. ಈ ಬಗ್ಗೆ ಈಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಪ್ರಶ್ನಿಸಿದರೆ, ಅದೊಂದು ತಂತ್ರವಾಗಿತ್ತು ಎಂಬ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ. ಈಗಿನ ಸರ್ಕಾರಕ್ಕೆ ಪ್ರತಿಪಕ್ಷಗಳನ್ನು ಹೇಗೆ ಮಾತನಾಡಿಸಬೇಕು ಎಂಬುದೇ ಗೊತ್ತಿಲ್ಲ. ಇದುವರೆಗೂ ಪ್ರಧಾನಿ ಮೋದಿ, ಪ್ರತಿಪಕ್ಷ ನಾಯಕರಿಗೆ ಒಂದು ದೂರವಾಣಿ ಕರೆ ಮಾಡಿ ಮಾತನಾಡಿಲ್ಲ. ಆದರೆ ಈ ಕೆಲಸ ವನ್ನು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಮಾಡುತ್ತಿದ್ದರು. ಸದ್ಯ ಕ್ಕಂತೂ ಕೇಂದ್ರದಲ್ಲಿ ಕೆಲವೇ ಮಂದಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅದೊಂದು ರೀತಿ ``ಒನ್ ಮ್ಯಾನ್ ಡಿಸೈಡ್ಸ್ ಎವೆರಿ ಸಿಂಗಲ್ ಡಿಸಿಶನ್'' ಎಂಬಂತೆ ಆಗಿದೆ. ಆದರೆ ಎಲ್ಲ ಪ್ರಶ್ನೆಗಳಿಗೂ ಒಬ್ಬನೇ ವ್ಯಕ್ತಿ ಉತ್ತರಿಸಲು
ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಂವಾದದಲ್ಲಿ ರಾಹುಲ್ ಗಾಂಧಿಗೆ ಮುಜುಗರ
ಮೌಂಟ್ ಕಾರ್ಮಲ್ ಕಾಲೇಜಿನ ಸಂವಾದದಲ್ಲಿ ರಾಹುಲ್ ಗಾಂಧಿ ಕೊಂಚ ಮುಜುಗರಕ್ಕೀಡಾದ ಘಟನೆಯೂ ನಡೆಯಿತು. ಕೇಂದ್ರ ಸರ್ಕಾರದ ಯೋಜನೆಗಳು ವಿಫಲವಾಗಿವೆ ಎಂದು ಟೀಕೆ ಮಾಡುತ್ತಿದ್ದ ರಾಹುಲ್ ಗಾಂಧಿ ``ಸ್ವಚ್ಛ ಭಾರತ್ ಯೋಜನೆ'' ಯಶಸ್ವಿಯಾಗಿದೆಯೇ ಎಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದರು. ಇದಕ್ಕೆ ಕೆಲವರು ``ಹೌದು'' ಎಂದೂ, ಇನ್ನೂ ಕೆಲವರು ``ಇಲ್ಲ'' ಎಂದೂ ಉತ್ತರಿಸಿದರು. ಆದರೆ ಅಲ್ಲುಂಟಾದ ಗೊಂದಲದಲ್ಲಿ ಹೌದು ಎಂದವರೇ ಹೆಚ್ಚು ಎಂಬ ಭಾವನೆ ಮೂಡಿತು. ಇದಕ್ಕೆ ರಾಹುಲ್ ``ನನಗೇನೂ ಹಾಗೆ ಅನ್ನಿಸುತ್ತಿಲ್ಲ''  ಎಂದರು. ಇದಾದ ಬಳಿಕ, ``ಮೇಕ್ ಇನ್ ಇಂಡಿಯಾ'' ಯೋಜನೆ ಯಶಸ್ವಿಯಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೂ ವಿದ್ಯಾರ್ಥಿನಿಯರು ಹೌದು ಎಂದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಜುಗರಕ್ಕೊಳಗಾದರು. ಈ ಸಂವಾದದ ಬಳಿಕ, ಸಾಮಾ ಜಿಕ ಜಾಲತಾಣದಲ್ಲಿ ರಾಹುಲ್  ಕುರಿತಂತೆ ದೊಡ್ಡ ಸಂವಾದವೇ ನಡೆಯಿತು. ``ಮುಜುಗರಕ್ಕೊಳಗಾದ ರಾಹುಲ್'' ಎಂಬ ಹ್ಯಾಷ್‍ಟ್ಯಾಗ್‍ನಲ್ಲಿ ಚರ್ಚೆಗಳಾದವು. ಈ ಸಂದರ್ಭದಲ್ಲಿ ಪರ ಮತ್ತು ವಿರೋಧ
ಅಭಿಪ್ರಾಯಗಳು ಕೇಳಿಬಂದವು.
ರಾಹುಲ್ ನುಡಿಗಳು
ನನ್ನ ತಾಯಿ, ಅಜ್ಜಿ ಮತ್ತು ತಂಗಿ ಜತೆಗೆ  ಬೆಳೆದಿದ್ದರಿಂದಲೇ ಮಹಿಳೆಯರ ಸಮಸ್ಯೆ ಅರ್ಥವಾಗಲು ಸಾಧ್ಯವಾಯಿತು.
-ನನ್ನ ಪ್ರಕಾರ, ನಿಮ್ಮೆಲ್ಲರನ್ನು ಸರಿಯಾಗಿ ಗೌರವಿಸಬೇಕು. ಇದಕ್ಕಾಗಿಯೇ ನಾನು ಹೋರಾಟ ನಡೆಸುತ್ತಿರುವುದು.
-ನಾವು ಪುಣೆ ಸಿನಿಮಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸರಿಯಾದ ನ್ಯಾಯ ದೊರಕಿಸಿಲ್ಲ, ಅವರ ಮಾತುಗಳನ್ನು ಕೇಳಬೇಕಿತ್ತು.
-ಸದ್ಯ ಕೇಂದ್ರದಲ್ಲಿ ಏಕವ್ಯಕ್ತಿ ಸರ್ಕಾರ  ನಡೆಯುತ್ತಿದೆ, ಎಲ್ಲ ಪ್ರಶ್ನೆಗಳಿಗೂ ಒಬ್ಬರೇ ಉತ್ತರ ಕೊಡಲು ಸಾಧ್ಯವೇ?
-ಪಬ್‍ಗೆ ಹೋದ ಮಹಿಳೆಯೊಬ್ಬರನ್ನು (ಮಂಗಳೂರು ಪ್ರಕರಣ)ಥಳಿಸಿದ್ದು ನನ್ನ ಮನಸ್ಸಿಗೆ ನೋವುಂಟು ಮಾಡಿತು.
-ನಾವು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದೆವು, ಆದರೆ ಎಲ್ಲೋ ತಪ್ಪಾಗಿರುವುದರಿಂದಲೇ ಸೋತೆವು.
-ಈ ಸರ್ಕಾರದಲ್ಲಿ ದಲಿತ ಮಕ್ಕಳನ್ನು  ನಾಯಿಗೆ ಹೋಲಿಕೆ(ವಿ.ಕೆ. ಸಿಂಗ್ ಪ್ರಕರಣ) ಮಾಡುತ್ತಾರೆ.
-ಲಕ್ಷಾಂತರ ಉದ್ಯೋಗ ಸೃಷ್ಟಿಸಲು ದೊಡ್ಡ ಕೈಗಾರಿಕೆಗಳಿಗೆ ಒಪ್ಪಿಗೆ ಕೊಡುವುದು ಸರಿ,ಆದರೆ ಆ ಉದ್ಯೋಗ ಬಡವರಿಗೆ ತಲುಪಬೇಕು.
-ಸದ್ಯ ಸರ್ಕಾರ ಕೇವಲ 5-6  ಕಾರ್ಪೊರೇಟ್ ಮಂದಿ ಜತೆ ಸಂಪರ್ಕವಿಟ್ಟುಕೊಂಡಿದೆ, ಹೀಗಾಗಿ ಇದುಬರೀ ಸೂಟ್ ಬೂಟ್ ಸರ್ಕಾರವಲ್ಲ, 5-6 ಸೂಟ್ ಬೂಟ್‍ಗಳ ಸರ್ಕಾರ.
-ಆದರೆ, ಈ ಸೂಟ್‍ಬೂಟ್ ಸರ್ಕಾರ ಎಲ್ಲ ರಂಗಗಳಲ್ಲೂ ವೈಫಲ್ಯ ಅನುಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com