ಸಿದ್ದರಾಮಯ್ಯ
ಪ್ರಧಾನ ಸುದ್ದಿ
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಆತಂಕಕಾರಿ: ಸಿಎಂ ಸಿದ್ದರಾಮಯ್ಯ
ಅಸಹಿಷ್ಣುತೆ ವಿವಾದಕ್ಕೆ ದನಿಗೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ...
ಬೆಂಗಳೂರು: ಅಸಹಿಷ್ಣುತೆ ವಿವಾದಕ್ಕೆ ದನಿಗೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಅಪಾಯಕಾರಿ ಮತ್ತು ಆತಂಕಕಾರಿ ಎಂದು ಶನಿವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ರಾಜ್ಯಸರ್ಕಾರದ ವತಿಯಿಂದ ನಡೆದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, 'ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಲಾಗುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಮೂಲತತ್ವದ ವಿರುದ್ದ ಪ್ರಚಾರ ಮಾಡಲಾಗುತ್ತಿದೆ'ಎಂದು ಬಿಜೆಪಿ ವಿರುದ್ದ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
'ಕನಕದಾಸರು ದಾಸರಲ್ಲಿ ದಾಸರಾಗಿದ್ದರು. ಕನಕದಾಸರು ಪುರಂದರ ದಾಸರು ದಾಸ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ' ಎಂದು ಸಿಎಂ ಹೇಳಿದರು.
ಮುಖ್ಯಮಂತ್ರಿ ಭಾಷಣ ಮಾಡುವ ವೇಳೆ ಕೆಲವರು ಶಿಳ್ಳೆ ಹೊಡೆದರು. ಈ ವೇಳೆ ಸಿಟ್ಟಿಗೆದ್ದ ಸಿದ್ದರಾಮಯ್ಯ 'ಶಿಳ್ಳೆ ಹೋಡಿ ಬೇಡ್ರೊ...ಇದು ವಿಧಾನ ಸೌಧ.ಸಿನೆಮಾ ಥಿಯೇಟರ್ ಅಲ್ಲ' ಎಂದು ಗದರಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ