ನರೇಂದ್ರ ಮೋದಿ
ಪ್ರಧಾನ ಸುದ್ದಿ
ಸೌರಶಕ್ತಿಯನ್ನು ಸದುಪಯೋಗ ಪಡಿಸಲು ರಾಷ್ಟ್ರಗಳಿಗೆ ಮೋದಿ ಕರೆ
ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಹಾಗೂ ಸೌರ ಚೈತನ್ಯವನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ 120 ರಾಷ್ಟ್ರಗಳ ಸಹಕಾರವನ್ನು ಬಯಸಿದ್ದಾರೆ...
ಪ್ಯಾರಿಸ್: ಪರಿಸರವನ್ನು ಸಂರಕ್ಷಿಸಿ, ಸೌರ ಚೈತನ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಎಲ್ಲ ರಾಷ್ಟ್ರಗಳು ಮುಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಸೋಮವಾರ ಆರಂಭವಾದ 12 ದಿನಗಳ ವಿಶ್ವ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಈ ಮಾತನ್ನಾಡಿದ್ದಾರೆ.
ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಹಾಗೂ ಸೌರ ಚೈತನ್ಯವನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ 120 ರಾಷ್ಟ್ರಗಳ ಸಹಕಾರವನ್ನು ಬಯಸಿದ್ದಾರೆ.
ತಂತ್ರಜ್ಞಾನವನ್ನು ಬಳಸಿಕೊಂಡು ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಪರಿಸರ ಸಂರಕ್ಷಣೆಗಾಗಿ ಎಲ್ಲ ರಾಷ್ಟ್ರಗಳ ಬದ್ಧವಾಗಿರಬೇಕೆಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ.
2030ರ ವೇಳೆಗೆ ಭಾರತವು ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸಿ ನವೀಕರಣಗೊಳಿಸಲ್ಪಡುವ ಶಕ್ತಿಗಳನ್ನು ಬಳಸುವ ಕ್ರಿಯೆಯಲ್ಲಿ ತೊಡಗಿಕೊಳ್ಳುವುದಾಗಿ ಪ್ರಧಾನಿ ಹೇಳಿದ್ದಾರೆ.
ಇದೀಗ, ಕೈಗಾರಿಕಾ ಕ್ರಾಂತಿಯಿಂದಾಗಿ ನಮ್ಮ ಭೂಮಿಯು ನಾಶದತ್ತ ಸಾಗುತ್ತಿದೆ. ಹೀಗಿರುವಾಗ ಸೌರಶಕ್ತಿಯನ್ನು ಬಳಸಿಕೊಂಡು ಚೈತನ್ಯ ಉತ್ಪಾದನೆಗೆ ಜಗತ್ತು ತಯಾರಾಗಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.
ಸೌರಶಕ್ತಿ ಬಳಕೆ ಬಗ್ಗೆ ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಿದ ಪ್ರಧಾನಿ ಸೌರಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳುವ ಈ ಯೋಜನೆಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಅಭಿವೃದ್ಧಿಶೀಲ ರಾಷ್ಟ್ರಗಳು, ಸರ್ಕಾರ ಮತ್ತು ಕೈಗಾರಿಕಾ ಕೇಂದ್ರಗಳು ಒಂದಾಗಿ ಶ್ರಮವಹಿಸಬೇಕೆಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ