ಬಾಷ್ ಗೆ ಭೇಟಿ ನೀಡಿದ ಪ್ರಧಾನಿ ಮೋದಿ-ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್

ಬೆಂಗಳೂರಿಗೆ ಭೇಟಿ ನೀಡಿರುವ ನರೇಂದ್ರ ಮೋದಿ- ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಬಾಷ್ ಕಂಪನಿಗೆ ಭೇಟಿ ನೀಡಿ ನ್ಯಾಸ್ಕಾಂ ಆಯೋಜಿಸಿದ್ದ ಭವಿಷ್ಯದ ಡಿಜಿಟಲೀಕರಣ ಶೃಂಗದಲ್ಲಿ ಭಾಗವಹಿಸಿದ್ದಾರೆ.
ನರೇಂದ್ರ ಮೋದಿ- ಏಂಜೆಲಾ ಮರ್ಕೆಲ್
ನರೇಂದ್ರ ಮೋದಿ- ಏಂಜೆಲಾ ಮರ್ಕೆಲ್

ಬೆಂಗಳೂರು: ಬೆಂಗಳೂರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ- ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಬಾಷ್ ಕಂಪನಿಗೆ ಭೇಟಿ ನೀಡಿ ನ್ಯಾಸ್ಕಾಂ ಆಯೋಜಿಸಿದ್ದ ಭವಿಷ್ಯದ ಡಿಜಿಟಲೀಕರಣ ಶೃಂಗದಲ್ಲಿ ಭಾಗವಹಿಸಿದ್ದಾರೆ.
ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ಪಾದನೆಗೆ ಹೆಚ್ಚಿನ ಮಹತ್ವ ನೀದಬೇಕಿದೆ, ಆದ್ದರಿಂದಲೇ ನಾವು ಮೆಕ್ ಇನ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ. ಜಾಗತಿಕ ಆರ್ಥಿಕತೆ ಕುಂಠಿತವಾಗಿದ್ದರೂ ಭಾರತ ಬಂಡವಾಳ ಹೂಡಿಕೆಗೆ ಉಜ್ವಲ ತಾಣವಾಗಿದೆ. ಭಾರತವನ್ನು ಹೂಡಿಕೆ ಸ್ನೇಹಿ ಪ್ರದೇಶವನ್ನಾಗಿಸಲು ಕಳೆದ 15 ತಿಂಗಳಿನಿಂದ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
ಭಾರತ- ಜರ್ಮನಿಯ ಆರ್ಥಿಕ ಸಂಬಂಧ ಅತಿ ಹೆಚ್ಚು ಸಾಮರ್ಥ್ಯ ಹೊಂದಿದ್ದು ವ್ಯಾಪಾರಕ್ಕೆ ಅನುಕೂಲಕರವಾಗುವಂತಹ ಪರಿಸ್ಥಿತಿಯನ್ನು ನಿರ್ಮಿಸಲು ಭಾರತ- ಜರ್ಮನಿ ಪ್ರಯತ್ನಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಜರ್ಮನಿ ಚಾನ್ಸೆಲರ್  ಏಂಜೆಲಾ ಮರ್ಕೆಲ್, ಜರ್ಮನಿ- ಭಾರತ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲು ಉಭಯ ದೇಶಗಳು ಉತ್ಸುಕವಾಗಿವೆ.  
ಭಾರತದ ಹೂಡಿಕೆದಾರರನ್ನು ಜರ್ಮನಿ ಸ್ವಾಗತಿಸುತ್ತದೆ. ಡಿಜಿಟಲೈಜೇಷನ್ ಕ್ಷೆತ್ರದಲ್ಲಿ ಭಾರತ-ಜರ್ಮನಿಗೆ ಉತ್ತಮ ಭವಿಷ್ಯವಿದೆ. ಮೋದಿ ಹಾಗೂ ತಮ್ಮ ಭೇಟಿ ಅಂಗವಾಗಿ ಬೆಂಗಳುರಿನಲ್ಲಿ ಜರ್ಮನಿ ಮೂಲದ 170 ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದು ಭಾರತ-ಜರ್ಮನಿ ದ್ವಿಪಕ್ಷೀಯ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. 
ಜರ್ಮನಿಯ ಇಂಜಿನಿಯರಿಂಗ್, ಐಟಿ ಕ್ಷೇತ್ರದಲ್ಲಿ ಭಾರತದ ಬುದ್ಧಿವಂತಿಕೆ ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದು ಏಂಜೆಲಾ ಮರ್ಕೆಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com