ಕೌಟುಂಬಿಕ ಹಿಂಸೆ ಪ್ರಕರಣ: ಸೋಮನಾಥ ಭಾರತಿಗೆ ಜಾಮೀನು

ಪತ್ನಿ ಲಿಪಿಕ ಮಿತ್ರ ಅವರ ಮೇಲೆ ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರತಿ ಅವರಿಗೆ ಕೋರ್ಟ್ ಜಾಮೀನು ನೀಡಿದೆ.
ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರತಿ
ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರತಿ

ನವದೆಹಲಿ: ಪತ್ನಿ ಲಿಪಿಕ ಮಿತ್ರ ಅವರ ಮೇಲೆ ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರತಿ ಅವರಿಗೆ ಕೋರ್ಟ್ ಜಾಮೀನು ನೀಡಿದೆ.

೧ ಲಕ್ಷ ಬಾಂಡ್ ನೀಡುವಂತೆ ಆದೇಶಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ತೀರ್ಪು ನೀಡಿದ್ದಾರೆ.

ಸೋಮಾವಾರ ಪೊಲೀಸರ ಮುಂದೆ ಶರಣಾಗಿದ್ದ ಭಾರತಿ ಅವರನ್ನು ಬಂಧಿಸಲಾಗಿತ್ತು. ಲಿಪಿಕಾ ಜೂನ್ ೧೦ ರಂದು ನಿಡಿದ್ದ ದೂರಿನ ಆಧಾರದ ಮೇಲೆ ಸೆಪ್ಟಂಬರ್ ೧೦ ರಂದು ದಾಖಲಿಸಿದ್ದ ಎಫ್ ಐ ಆರ್ ನಲ್ಲಿ ಭಾರತಿಯವರನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ೨೦೧೦ರಲ್ಲಿ ಮದುವೆಯದಾಗಲಿಂದಲೂ ತಮಗೆ ಕೌಟುಂಬಿಕ ಹಿಂಸೆ ನೀಡುತ್ತಿರುವುದಾಗಿ ಭಾರತಿ ಅವರ ಪತ್ನಿ ಲಿಪಿಕಾ ದೂರಿದ್ದರು.

ಸದಾ ಹೊಡೆಯುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಕೂಡ ಲಿಪಿಕ ದೂರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com