ಆಂಧ್ರ ವಿಶೇಷ ಸ್ಥಾನಮಾನಕ್ಕೆ ಉಪವಾಸ ಮುಂದುವರೆಸಿದ ಜಗನ್

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ವೈ ಎಸ್ ಆರ್ ಸಿ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಮಾಡುತ್ತಿರುವ ಅನಿರ್ಧಿಷ್ಟ ಕಾಲದ ಉಪವಾಸ ಗುರುವಾರ
ವೈ ಎಸ್ ಆರ್ ಸಿ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ
ವೈ ಎಸ್ ಆರ್ ಸಿ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ

ವಿಜಯವಾಡ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ವೈ ಎಸ್ ಆರ್ ಸಿ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಮಾಡುತ್ತಿರುವ ಅನಿರ್ಧಿಷ್ಟ ಕಾಲದ ಉಪವಾಸ ಗುರುವಾರ ಎರಡನೆ ದಿನಕ್ಕೆ ಕಾಲಿಟ್ಟಿದೆ.

ಹಲವಾರು ಸಂಘಟನೆಯ ಮುಖಂಡರು ಜಗನ್ ಆವರ ಜೊತೆ ಮಾತುಕತೆ ನಡೆಸಿದ್ದಾರೆ. ವೈ ಎಸ್ ಆರ್ ಕಾಂಗ್ರೆಸ್ ನ ಇತರ ಮುಖಂಡರೂ ಕೂಡ ಉಪವಾಸ ಧರಣಿಯಲ್ಲಿ ಭಾಗಿಯಾಗಿದ್ದಾರೆ.

ತಮ್ಮ ತಮ್ಮ ಜಿಲ್ಲೆಗಳಲ್ಲೇ ಉಪವಾಸ ಧರಣಿಗಳನ್ನು ಹಮ್ಮಿಕೊಳ್ಳುವಂತೆ ಪಕ್ಷದ ಜಿಲ್ಲ ಘಟಕಗಳಿಗೂ ತಿಳಿಸಲಾಗಿದೆ.

ಸರ್ಕಾರ ಮುಂದೆ ಬಂದು ವಿಶೇಷ ಸ್ಥಾನಮಾನವನ್ನು ಘೋಷಿಸುವವರೆಗೂ ಉಪವಾಸ ಮುಂದುವರೆಸುವುದಾಗಿ ಜಗನ್ ಹೇಳಿದ್ದಾರೆ. ಬಿಜೆಪಿ ನಾಯಕತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯದ ತೆಲುಗು ದೇಶಂ ಪಕ್ಷದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, ವಿಶೇಷ ಸ್ಥಾನಮಾನಕ್ಕೆ ತಡವಾಗುತ್ತಿರುವುದಕ್ಕೆ ಈ ಸರ್ಕಾರಗಳನ್ನು ದೂರಿದ್ದಾರೆ.

ಟಿಡಿಪಿ ಪಕ್ಷ ಕೇಂದ್ರ ಎನ್ ಡಿ ಎ ಸರ್ಕಾರದ ಭಾಗವಾಗಿದ್ದರೂ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಗಳಿಸಿಕೊಡುವುದರಲ್ಲಿ ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಮೇಲೆ ವಿರೋಧ ಪಕ್ಷದ ನಾಯಕರೂ ಆಗಿರುವ ಜಗನ್ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com