ಬೀಫ್ ಪಾರ್ಟಿ ಸಮರ್ಥಿಸಿಕೊಂಡ ಕಾಶ್ಮೀರ ಶಾಸಕ, ಬಿಜೆಪಿಯಿಂದ ಹತ್ಯೆಗೆ ಯತ್ನ ಆರೋಪ

ಬೀಫ್ ಪಾರ್ಟಿ ಆಯೋಜಿಸಿದ್ದಕ್ಕಾಗಿ ಬಿಜೆಪಿ ಶಾಸಕರಿಂದ ಹಲ್ಲೆಗೊಳಗಾಗಿರುವ ಕಾಶ್ಮೀರ ಪಕ್ಷೇತರ ಶಾಸಕ, ಎಂಜಿನಿಯರ್ ರಶೀದ್ ಅವರು...
ರಶೀದ್
ರಶೀದ್

ಶ್ರೀನಗರ: ಬೀಫ್ ಪಾರ್ಟಿ ಆಯೋಜಿಸಿದ್ದಕ್ಕಾಗಿ ಬಿಜೆಪಿ ಶಾಸಕರಿಂದ ಹಲ್ಲೆಗೊಳಗಾಗಿರುವ ಕಾಶ್ಮೀರ ಪಕ್ಷೇತರ ಶಾಸಕ, ಎಂಜಿನಿಯರ್ ರಶೀದ್ ಅವರು, ತಮ್ಮ ಬೀಫ್ ಪಾರ್ಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಶ್ಮೀರ ವಿಧಾನಸಭೆಯಲ್ಲಿ ಹಲ್ಲೆಗೊಳಗಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಶೀದ್, ನಾನು ಯಾವುದೇ ಕಾನೂನ ಬಾಹಿರ ಕೃತ್ಯ ಎಸಗಿಲ್ಲ. ನಾನು ಶಾಸಕರ ಭವನದ ಸೌಲಭ್ಯವನ್ನು ಬಳಸಿಕೊಳ್ಳುವುದಿಲ್ಲ. ಹೀಗಾಗಿ ಹೊರಗಡೆಯಿಂದ ಆಹಾರ(ಬೀಫ್) ತರಿಸಿದ್ದೇನೆ. ಇದರಿಂದ ಯಾರ ಭಾವನೆಗೂ ಧಕ್ಕೆಯುಂಟು ಮಾಡುವ ಉದ್ದೇಶ ಇಲ್ಲ ಎಂದಿದ್ದಾರೆ.

ಭಾರತೀಯ ಜನತಾ ಪಕ್ಷ(ಬಿಜೆಪಿ) ನನ್ನ ಕೊಲೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಶಾಸಕ, ಸುಮಾರು 6ರಿಂದ 8 ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದರು. ಪ್ರಜಾಪ್ರಭುತ್ವದ ವರ್ತನೆ ಇದೇನಾ ಎಂದು ಪ್ರಶ್ನಿಸಿದ್ದಾರೆ.

'ಶಾಸಕರ ಭವನದಲ್ಲಿ ನಿಮಗೆ ಹಲವು ಮದ್ಯದ ಬಾಟಲಿಗಳು ಸಿಗುತ್ತವೆ. ಶಾಸಕರು ಶಾಸಕರ ಭವನದಲ್ಲಿ ಮದ್ಯ ಸೇವನೆ ಮಾಡಬಹುದಾದರೆ, ಬೀಫ್ ಏಕೆ ತಿನ್ನಬಾರದು' ಎಂದು ರಶೀದ್ ಪ್ರಶ್ನಿಸಿದ್ದಾರೆ.

ಬೀಫ್ ಔತಣಕೂಟವನ್ನು ಆಯೋಜಿಸಿದ್ದಕ್ಕೆ ಜಮ್ಮು ಮತ್ತು ಕಾಶ್ಮೀರದ ಶಾಸಕ ರಶೀದ್ ಅವರಿಗೆ ವಿಧಾನಸಭೆಯಲ್ಲೇ ಬಿಜೆಪಿ ಶಾಸಕರು ಇಂದು ಥಳಿಸಿದ ಘಟನೆ ನಡೆದಿದೆ.

ಕಾಶ್ಮೀರದಲ್ಲಿ ಗೋಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ಇದನ್ನು ಜಾರಿಗೊಳಿಸುವಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಆದೇಶಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಎರಡು ತಿಂಗಳ ಕಾಲ ಹೈಕೋರ್ಟ್ ಆದೇಶವನ್ನು ಅಮಾನತುಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com