

ನವದೆಹಲಿ: ಸಾಮೂಹಿಕ ಅತ್ಯಾಚಾರಕ್ಕೆ ಹೊಸ ವ್ಯಾಖ್ಯಾನ ನೀಡಿ, ಗ್ಯಾಂಗ್‍ರೇಪ್ ಎಂದು ಕರೆಯಬೇಕಾದರೆ 3 ಅಥವಾ 4ಕ್ಕಿಂತ ಹೆಚ್ಚು ಮಂದಿ ಇರಬೇಕು ಎಂದಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ನೀಡಲು ಮುಂದಾಗಿದೆ.
ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಯಾವುದೇ ಆಲೋಚನೆ ಮಾಡದೇ ಹೇಳಿಕೆ ನೀಡುತ್ತಿರುವುದಕ್ಕೆ ಕರ್ನಾಟಕ ಗೃಹ ಸಚಿವರ ಹೇಳಿಕೆ ಮತ್ತೊಂದು ಉದಾಹರಣೆ ಎಂದು ರಾಷ್ಟ್ರೀಯ ಮಹಿಳಾ ಆಗೋದ ಅಧ್ಯಕ್ಷೆ ಕುಮಾರಮಂಗಲಂ ಅವರು ಹೇಳಿದ್ದಾರೆ.
'ಅತ್ಯಾಚಾರದ ಅರ್ಥಾನೇ ಅವರಿಗೆ ಗೊತ್ತಿಲ್ಲ. ಹೀಗಾಗಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ' ಎಂದು ಕುಮಾರಮಂಗಲಂ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ ನಾವು ಅವರಿಗೆ ಸ್ವಯಂ ಪ್ರೇರಿತವಾಗಿ ನೋಟಿಸ್ ಜಾರಿ ಮಾಡುತ್ತೇವೆ. ನೋಡೋಣ ಅವರು ಹೇಗೆ ಪ್ರತಿಕ್ರಿಸುತ್ತಾರೆ ಎಂದಿದ್ದಾರೆ.
ಘಟನೆ ಸಂಬಂಧ ಮಾಧ್ಯಮಗಳು ಜಾರ್ಜ್ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಈ ಪ್ರಕರಣವನ್ನು ಹೇಗೆ ಗ್ಯಾಂಗ್‍ರೇಪ್ ಎಂದು ಕರೆಯುತ್ತೀರಿ? ಗ್ಯಾಂಗ್‍ರೇಪ್ ಎಂದು ಕರೆಯಬೇಕಾದರೆ 3 ಅಥವಾ 4ಕ್ಕಿಂತ ಹೆಚ್ಚು ಮಂದಿ ಇರಬೇಕು ಎಂದಿದ್ದರು.
Advertisement