ಭಜರಂಗದಳ ಕಾರ್ಯಕರ್ತನ ಕೊಲೆ: ಮೂಡುಬಿದಿರೆಯಲ್ಲಿ ಉದ್ವಿಗ್ನ

ಮೂಡುಬಿದಿರೆಯ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳಿಗ್ಗೆ ಬಜರಂಗದಳ ಕಾರ್ಯಕರ್ತ ಹಾಗೂ ಹೂವಿನ ವ್ಯಾಪಾರಿಯಾದ ಪ್ರಶಾಂತ ಪೂಜಾರಿ (26) ಅವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿದೆ ಬಂದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಮೂಡುಬಿದಿರೆ: ಮೂಡುಬಿದಿರೆಯ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳಿಗ್ಗೆ ಬಜರಂಗದಳ ಕಾರ್ಯಕರ್ತ ಹಾಗೂ ಹೂವಿನ ವ್ಯಾಪಾರಿಯಾದ ಪ್ರಶಾಂತ ಪೂಜಾರಿ (26) ಅವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿದೆ ಬಂದಿದೆ.

ಬಿರಾವು ಆನಂದ ಪೂಜಾರಿ ಎಂಬುವವರ ಪುತ್ರ ಪ್ರಶಾಂತ್ ಪೂಜಾರಿ (29) ಕೊಲೆಯಾದ ಯುವಕ. ಬಜಂರಂಗ ದಳದ ಕಾರ್ಯಕರ್ತರಾಗಿದ್ದ ಪ್ರಶಾಂತ್ ಮೂಡುಬಿದರೆಯ ಸಮಾಜ ಮಂದಿರದ ಬಳಿ ತಂದೆಯೊಂದಿಗೆ ಹೂವಿನ ವ್ಯಾಪಾರ ನಡೆಸಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಎಂದಿನಂತೆ ನಿನ್ನೆ ಬೆಳೆಗ್ಗೆ ಸುಮರು 7 ಗಂಟೆಗೆ ವ್ಯಾಪಾರಕ್ಕೆಂದು ಪ್ರಶಾಂತ್ ಬಂದಿದ್ದಾನೆ. ಈ ವೇಳೆ ಬೈಕ್ ನಲ್ಲಿ ಮುಸುಕುಧಾರಿಗಳಾಗಿ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಪ್ರಶಾಂತ್ ನನ್ನು ಕೊಚ್ಚಿ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್ ನನ್ನು ಅಲ್ಲಿನ ಸ್ಥಳೀಯರೇ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿದ್ದರು. ಆದರೆ, ಪ್ರಶಾಂತ್ ಸ್ಥಿತಿ ತೀರಾ ಗಂಭೀರವಾಗಿದ್ದರಿಂದ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ವೈದ್ಯರ ಮಾತಿನಂತೆ ಪ್ರಶಾಂತ್ ನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಪ್ರಶಾಂತ್ ಕೊನೆಯುಸಿರೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ.
 
ತಂದೆಯ ಎದುರೇ ಕೃತ್ಯ
ತಂದೆಯೊಂದಿಗೆ ಎಂದಿನಂತೆ ಹೂವಿನ ವ್ಯಾಪರಕ್ಕೆ ಬಂದಿದ್ದ ಪ್ರಶಾಂತ್ ನನ್ನು ಆತನ ತಂದೆಯ ಎದುರೇ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಘಟೆ ವೇಳೆ ದುಷ್ಕರ್ಮಿಗಳನ್ನು ತಡೆಯಲು ಪ್ರಶಾಂತ್ ತಂದೆ ಯತ್ನಿಸಿದರಾದರೂ ಅವರ ಪ್ರಯತ್ನ ಪ್ರಯೋಜನವಾಗಿಲ್ಲ. ದುಷ್ಕರ್ಮಿಗಳು ಮೂರು ಬೈಕ್ ಗಳಲ್ಲಿ ಬಂದಿದ್ದು, ಇದರಲ್ಲಿ ಎರಡು ಬೈಕ್ ಗಳಿಗೆ ನಂಬರ್ ಪ್ಲೇಟ್ ಇರಲಿಲ್ಲ ಎಂಬುದರ ಮಾಹಿತಿ ಇದೀಗ ಲಭ್ಯವಾಗಿದೆ.

ಪ್ರಶಾಂತ್ ಹತ್ಯೆ: ಮೂಡುಬಿದಿರೆಯಲ್ಲಿ ಉದ್ವಿಗ್ನ ವಾತಾವರಣ

ಪ್ರಶಾಂತ್ ಹತ್ಯೆ ಪ್ರಕರಣ ಇದೀಗ ಮೂಡುಬಿದಿರೆಯಲ್ಲಿ ಉದ್ವಿಗ್ನ ವಾತಾವರಣವನ್ನುಂಟು ಮಾಡಿದೆ. ಇಂದು ಸಂಜೆ ಪ್ರಶಾಂತ್ ಅವರ ಶವ ಸಂಸ್ಕಾರ ನಡೆದ ಬಳಿಕ ಪೇಟೆಯಲ್ಲಿ ಕೆಲವು ಅನ್ಯ ಕೋಮಿನ ಅಂಗಡಿಗಳ ಮೇಲೆ ಕಲ್ಲು ತೂರುವ ಪ್ರಯತ್ನ ನಡೆದಿದ್ದು, ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಮೂಡುಬಿದಿರೆ ಪೇಟೆ ಮತ್ತು ಹೋಬಳಿ ಇಡೀ ದಿನ ಬಂದ್‌ ಆಗಿತ್ತು.

ಹಠಾತ್‌ ಆಗಿ ಮೂಡುಬಿದಿರೆ, ಹೋಬಳಿ ಬಂದ್‌ ಆಗಿದ್ದರಿಂದ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ತೊಂದರೆಪಟ್ಟಿದ್ದರು. ಪ್ರಸ್ತುತ ಮೂಡುಬಿದಿರೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು,  ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭವಾಗಿದೆ. ಹತ್ಯೆಗೀಡಾದ ಪ್ರಶಾಂತ್ ಪೂಜಾರಿ ಅವರು ಅಕ್ರಮ ಗೋಸಾಗಣೆ ವಿರುದ್ಧ ಸಕ್ರಿಯರಾಗಿದ್ದರು. ಇದರಿಂದಾಗಿ ಅವರಿಗೆ ಜೀವ ಬೆದರಿಕೆ ಇತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com