ಯದುವೀರ ಒಡೆಯರ್, ಪ್ರಮೋದಾ ದೇವಿಗೆ ಕೋರ್ಟ್ ನೋಟಿಸ್

ಖಾಸಗಿ ದರ್ಬಾರ್ ಸಂಭ್ರಮದಲ್ಲಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾ ದೇವಿ ಅವರಿಗೆ ಬುಧವಾರ...
ಯದುವೀರ ಒಡೆಯರ್ - ಪ್ರಮೋದಾ ದೇವಿ
ಯದುವೀರ ಒಡೆಯರ್ - ಪ್ರಮೋದಾ ದೇವಿ

ಮೈಸೂರು: ಖಾಸಗಿ ದರ್ಬಾರ್ ಸಂಭ್ರಮದಲ್ಲಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾ ದೇವಿ ಅವರಿಗೆ ಬುಧವಾರ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮೈಸೂರು ರಾಜಮನೆತನದ ಉತ್ತರಾಧಿಕಾರಿ ಯದುವೀರ್ ಒಡೆಯರ್ ದತ್ತು ಸ್ವೀಕಾರ ಪ್ರಶ್ನಿಸಿ ಚದುರಂಗ ಕಾಂತರಾಜೇ ಅರಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡಿಸಿದ ಮೈಸೂರು ಜಿಲ್ಲಾ ನ್ಯಾಯಾಲಯ, ರಾಜಮಾತೆ ಪ್ರಮೋದಾದೇವಿ ಮತ್ತು ಯುವರಾಜ ಯದುವೀರ್ ಒಡೆಯರ್ ಅವರಿಗೆ ನೋಟಿಸ್ ನೀಡಿದೆ.

ಹಿಂದೂ ಕಾಯ್ದೆ ಪ್ರಕಾರ ಯದುವೀರ್ ಅವರನ್ನು ದತ್ತು ಸ್ವೀಕರಿಸಲು ಬರುವುದಿಲ್ಲ. 17 ವರ್ಷದೊಳಗಿನವರನ್ನು ದತ್ತು ಸ್ವೀಕರಿಸಬಹುದಾಗಿದೆ. ಆದರೆ ಯದುವೀರ್ ಅವರಿಗೆ 22 ವರ್ಷ. ಹೀಗಾಗಿ ಯದುವೀರ್ ದತ್ತು ಸ್ವೀಕಾರ ರದ್ದುಗೊಳಿಸಬೇಕು ಎಂದು ಕೋರಿ ಕಾಂತರಾಜೇ ಅರಸ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.

ರಾಜಮನೆತನದ ಒಡೆಯರ್ ಉತ್ತರಾಧಿಕಾರಿಯನ್ನಾಗಿ ಮಾಡಲು ಚಾಮರಾಜ ಒಡೆಯರ್ ಅವರ ಹಿರಿಯ ಪುತ್ರಿ ಗಾಯಿತ್ರಿದೇವಿ ಮಗಳಾದ ತ್ರಿಪುರಸುಂದರಿ ದೇವಿ ಮತ್ತು ಸ್ವರೂಪ್ ಆನಂದ್ ಗೋಪಾಲರಾಜೇ ಅರಸ್ ದಂಪತಿಗಳ ಪುತ್ರನಾಗಿರುವ ಯದುವೀರ್ ಒಡೆಯರ್ (22ವರ್ಷ)ಅವರನ್ನು ಪ್ರಮೋದಾದೇವಿ ದತ್ತು ಸ್ವೀಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com