ದುರ್ಗಾ ದೇವತೆಯ ಮೇಲೆ ಅಂಚೆ ಚೀಟಿ ಬಿಡುಗಡೆ ಮಾಡಿದ ಆಫ್ರಿಕಾ ದೇಶ

ನವರಾತ್ರಿ ಮತ್ತು ದುರ್ಗಾ ಪೂಜೆಯಂತಹ ಭಾರತೀಯ ಹಬ್ಬಗಳ ಬಗ್ಗೆ ಜಾಗತಿಕವಾಗಿ ಅಸಕ್ತಿಯಿ ಹೆಚಿರುವುದನ್ನು ಗುರುತಿಸಿರುವ ಆಫ್ರಿಕಾದ ದ್ವೀಪ ರಾಷ್ಟ್ರವೊಂದು
ದುರ್ಗಾ ದೇವತೆ
ದುರ್ಗಾ ದೇವತೆ

ಕೋಲ್ಕತ್ತ: ನವರಾತ್ರಿ ಮತ್ತು ದುರ್ಗಾ ಪೂಜೆಯಂತಹ ಭಾರತೀಯ ಹಬ್ಬಗಳ ಬಗ್ಗೆ ಜಾಗತಿಕವಾಗಿ ಅಸಕ್ತಿಯಿ ಹೆಚಿರುವುದನ್ನು ಗುರುತಿಸಿರುವ ಆಫ್ರಿಕಾದ ದ್ವೀಪ ರಾಷ್ಟ್ರವೊಂದು ದುರ್ಗಾ ದೇವಿಯ ಮೇಲೆ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.

ವೆಲ್ವೆಟ್ ಸ್ಪರ್ಶವಿರುವ ಈ ನಿಯಮಿತ ಪ್ರಮಾಣದ ಸಂಗ್ರಹಕಾರರ ಅಂಚೆಚೀಟಿಯನ್ನು ಸಾವೋ ಟೋಮ್ ಮತ್ತು ಪ್ರಿನ್ಸಿಪ್ ಎಂಬ ಆಫ್ರಿಕಾದ ದ್ವೀಪ ದೇಶ ಬಿಡುಗಡೆ ಮಾಡಿದೆ ಎಂದು ಈ ಅಂಚೆ ಚೀಟಿಯ ಮಾರಾಟ ಹಕ್ಕುಗಳನ್ನು ಪಡೆದಿರುವ ಅಲೋಕ್ ಗೋಯಲ್ ತಿಳಿಸಿದ್ದಾರೆ.

ಪೋರ್ಚುಗೀಸ್ ಭಾಷೆ ಮಾತನಾಡುವ ಈ ದೇಶದಲ್ಲಿ ೮೬೦೦೦ ಡೋಬ್ರಾ ಬೆಲೆಯ ಅಂಚೆಚೀಟಿಯಲ್ಲಿ, ಹುಲಿಯ ಮೇಲೆ ಕುಳಿತ 'ಶೇರ್ವಾಲಿ ಮಾ' ಚಿತ್ರವಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಅಂಚೆಚೀಟಿಯ ಕೇವಲ ೧೫೦೦ ಪ್ರತಿಗಳನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ೧೦೦೦ ಅಂಚೆಚೀಟಿಗಳು ಲಭ್ಯವಿವೆ ಎಂದು ಗೋಯಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com