ದಾದ್ರಿ ದುರದೃಷ್ಟಕರ

ದಾದ್ರಿಯ ಗೋಮಾಂಸ ಭಕ್ಷಣೆ ಸಂಬಂಧಿತ ಹತ್ಯೆ ಹಾಗೂ ಮುಂಬೈ, ಪುಣೆಯಲ್ಲಿ ಪಾಕ್ ಗಾಯಕ ಗುಲಾಮ್ ಅಲಿ ಸಂಗೀತ ಕಚೇರಿ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on
ಕೊಲ್ಕತ್ತಾ: ದಾದ್ರಿಯ ಗೋಮಾಂಸ ಭಕ್ಷಣೆ ಸಂಬಂಧಿತ ಹತ್ಯೆ  ಹಾಗೂ ಮುಂಬೈ, ಪುಣೆಯಲ್ಲಿ ಪಾಕ್ ಗಾಯಕ ಗುಲಾಮ್  ಅಲಿ ಸಂಗೀತ ಕಚೇರಿ ರದ್ಧತಿ ಪ್ರಕರಣಗಳೆರಡೂ  ಅನಪೇಕ್ಷಿತ ಮತ್ತು ದುರದೃಷ್ಟಕರ. ಆದರೆ ಇದರಲ್ಲಿ ಕೇಂದ್ರದ ಪಾತ್ರ  ಏನೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡೂ  ಘಟನೆಗಳ ಬಗ್ಗೆ ವಿರೋಧದ ಕೂಗು ತೀವ್ರವಾದ ನಂತರ ಮೊದಲ ಬಾರಿಗೆ ಮೋದಿ ಪಶ್ಚಿಮ ಬಂಗಾಳದ ಆನಂದ ಬಜಾರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ   ಈ ಬಗ್ಗೆ ಮಾತನಾಡಿದ್ದಾರೆ.  ಬಿಜೆಪಿ ಎಂದೂ ಈ ಬಗೆಯ ಕೃತ್ಯಗಳನ್ನು ಸಮರ್ಥಿಸಿಲ್ಲ,  ಪ್ರತಿಪಕ್ಷಗಳು ಅವುಗಳನ್ನು ಉಪಯೋಗಿಸಿಕೊಂಡು ಬಿಜೆಪಿಯ  ವಿರುದ್ಧದ ಕೋಮುವಾದದ ಆರೋಪ ಮಾಡುತ್ತಿದ್ದಾರೆ. ಇದರ ಮೂಲಕ ಅವರೇ ಧ್ರುವೀಕರಣದ ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದಾರೆ.
ಈ ಹಿಂದೆಯೂ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.  ಬಿಜೆಪಿ ಪೊಳ್ಳು ಜಾತ್ಯಾತೀತತೆಯನ್ನು ವಿರೋಧಿಸುತ್ತದೆ.ದುರದೃಷ್ಟಕರ ಸಾಮಾಜಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವುರ ಮತ್ತೆ ಎದ್ದಿವೆ. ಈ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದಾಗಿಗದೆ ಎಂದು ಹೇಳಿದ್ದಾರೆ.  ಕಳೆದ ವಾರ ಅವರು ಹೀಂದೂ ಮುಸ್ಲಿಮರು ಪರಸ್ಪರ ಹೊಡೆದಾಡುವುದನ್ನು ಬಿಟ್ಟು ಬಡತನದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದರು.
ಸರ್ಕಾರ ನುಣುಚಿಕೊಳ್ಳುತ್ತಿದೆ: ಈ ಪ್ರಕರಣಗಳಲ್ಲಿ ತನಗೆ ಯಾವ ಪಾತ್ರವೂ ಇಲ್ಲವೆಂದು ನುಣುಚಿಕೊಳ್ಳುವುದು ಕೇಂದ್ರ  ಸರ್ಕಾರಕ್ಕ ಹೇಳಿಸಿದ್ದಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಪ್ರಧಾನಿ ಈ ಘಟನೆಗಳನ್ನು ಕ್ಷುಲ್ಲಕಗೊಳಿಸಲು ಇಚ್ಛಿಸುತ್ತಿದ್ದಾರೆ. ನಮ್ಮ ಸಾಮಾಜಿಕ ಹೆಣಿಗೆಯು ಹೊಸ ಸರ್ಕಾರ ದಡಿಯಲ್ಲಿ ವ್ಯವಸ್ಥಿತವಾಗಿ ಶಿಥಿಲಗೊಳ್ಳುತ್ತಿದೆ. ಇದಕ್ಕೆ ದಾದ್ರಿ ಹತ್ಯೆಯು ಸಂಕೇತವಾಗಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ. ಬಿಜೆಪಿ ತನ್ನ ಮಿತ್ರರಿಂದಲೇ  ಸಮಸ್ಯೆಗಳನ್ನೆದುರಿಸುತ್ತಿದೆ. ಆದರೆ ನಮ್ಮ ದೇಶ ನಿಧಾನವಾಗಿ ಅಸಹಿಷ್ಣು ಸಮಾಜವಾಗುತ್ತಿದೆ. ಜಗತ್ತು ನಮ್ಮನ್ನು ನೋಡುತ್ತಿದೆ. ಯಾರು ಅಧಿಕಾರದಲ್ಲಿದ್ದಾರೋ, ಯಾರು ನಮ್ಮ ಜಾತ್ಯಾತೀತ ಚಿಂತನೆಯನ್ನು ಒಡೆಯಲು ಯತ್ನಿಸುತ್ತಿದ್ದಾರೋ ಅವರ ಸಿದ್ಧಾಂತಗಳು ದೇಶಕ್ಕೆ ಅನಪೇಕ್ಷಿತ ಎಂದಿದ್ದಾರೆ.
ಪ್ರಧಾನಿ ಮೋದಿ ಜಾಣ ಮರೆವಿನಿಂದ ನರಳುತ್ತಿದ್ದಾರೆ. ತಾನು ಪ್ರಧಾನಿ, ತಾನು ಈ ದೇಶದ 125 ಕೋಟಿ ಜನತೆಯನ್ನು ರಕ್ಷಿಸಬೇಕಾಗಿದೆ ಎಂಬ ಹೊಣೆಗಾರಿಕೆಯನ್ನು ಅವರು ಮರೆಯುತ್ತಿದ್ದಾರೆ ಎಂದುಕಾಂಗ್ರೆಸ್ ವಕ್ತಾರ ರಣದೀಪ್ ಸೂರಜ್  ವಾಲಾ ಹೇಳಿದ್ದಾರೆ.
ಮೋದಿ ಹೇಳಿಕೆ ದುರದೃಷ್ಟಕರ: ಗುಲಾಮ್  ಅಲಿ ಪ್ರಕರಣ ದುರದೃಷ್ಟಕರ ಎಂದಿರುವ ಮೋದಿ ಹೇಳಿಕೆಯಿಂದ ಕೆರಳಿರುವ ಶಿವಸೇನೆ, ಮೋದಿ ಹೇಳಿಕೆ ದುರದೃಷ್ಟಕರ ಎಂದು ತಿರುಗೇಟು ನೀಡಿದೆ. ಪ್ರಧಾನಿ ಮೋದಿ ಗೋಧ್ರಾ ಮತ್ತು ಅಹಮದಾಬಾದ್ ಪ್ರಕರಣಗಳಿಂದಲೇ ಖ್ಯಾತರಾದವರು ಹಾಗೂ ನಮ್ಮ ಗೌರವಕ್ಕೆ ಪಾತ್ರರಾ ದವರು. ಅದೇ ಮೋದಿಯೇ ಇಂದು ಗುಲಾಮ್  ಅಲಿ ಮತ್ತು ಕಸೂರಿ ಪ್ರಕರಣಗಳಬಗ್ಗೆ ಹೀಗೆ ಹೇಳುತ್ತಿರುವುದಾದರೆ ಅದು ದುರದೃಷ್ಟಕರ ಎಂದು ಸೇನೆಯ ಸಂಸತ್  ಸದಸ್ಯ ಸಂಜಯ ರಾವತ್ ಹೇಳಿದ್ದಾರೆ.
ಶಿವಸೇನೆ- ಬಿಜೆಪಿ ಒಡಕು?: ಬಿಜೆಪಿ ಮುಖಂಡ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ ಬಳಿದ ಘಟನೆಯ ಹಿನ್ನೆಲೆಯಲ್ಲಿ, ಶಿವಸೇನೆ ಮತ್ತು ಬಿಜೆಪಿಯ ನಡುವೆ ತಲೆದೋರಿರುವ ಒಡಕು ದೊಡ್ಡದಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕರನ್ನು ಟೀಕಿಸುವ ಯಾವುದೇ ಅವಕಾಶವನ್ನೂ ಸೇನೆ ಬಿಟ್ಟಿಲ್ಲ.ಮೋದಿ, ಅಮಿತ್ ಶಾ, ಮುಖ್ಯಮಂತ್ರಿ ಫಡ್ನವಿಸ್ ಎಲ್ಲರೂ ಸೇನೆಯ ಟೀಕಾಸ್ತ್ರಕ್ಕೆ ಒಳಗಾಗಿದ್ದಾರೆ. ಒಂದು ವೇಳೆ ಸೇನೆ ಮಹಾರಾಷ್ಟ್ರದಲ್ಲಿ ಕೈಕೊಟ್ಟರೆ, ಸ್ವಂತವಾಗಿ ಸರಕಾರ ರಚಿಸುವ ಬಗ್ಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಕೆಲ
ಮೂಲಗಳು ತಿಳಿಸಿವೆ. ಆದರೆ, ಅರ್ಧದಲ್ಲೇ ಚುನಾವಣೆಗೆ ಹೋಗುವ ಅಭಿಪ್ರಾಯ ಯಾರಿಗೂ ಇಲ್ಲ ಎಂದೂ ಕೆಲವು ಹೇಳಿದ್ದಾರೆ.
ವಿಳಂಬಿತ ಪ್ರತಿಕ್ರಿಯೆ: ದಾದ್ರಿ ಘಟನೆಗೆ ಸಂಬಂಧಿಸಿ ಮೋದಿ ನೀಡಿರುವ ಹೇಳಿಕೆ ತೀರಾ ನಗಣ್ಯ ಹಾಗೂ ತುಂಬಾ ವಿಳಂಬಿತವಾಗಿದೆ. ಇದು ಕರ್ತವ್ಯದಿಂದ ತಪ್ಪಿಸಿಕೊಳ್ಳುತ್ತಿರುವವರ ನಡೆ ಎಂದು ಸಿಪಿಐ ಟೀಕಿಸಿದೆ. ಹತ್ಯೆಯು ನೇರವಾಗಿ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಸಂಬಂಧಿಸಿದೆ. ಪ್ರಧಾನಿಯ ಮೇಲೆ ಸಾಂವಿಧಾನಿಕಮೌಲ್ಯಗಳನ್ನು ಎತ್ತಿ ಹಿಡಿಯುವ
ಹೊಣೆಯಿದೆ ಎಂದು ಸಿಪಿಐ ನಾಯಕ ಡಿ. ರಾಜಾ ಹೇಳಿದ್ದಾರೆ. ವದಂತಿಗಳ ಆಧಾರದಲ್ಲಿ ಒಬ್ಬ ಮುಸ್ಲಿಂನನ್ನು ಕೊಲ್ಲುವುದು ಅಸಹಿಷ್ಣುತೆಯ ಪರಮಾವಧಿ ಹಾಗೂ ಸಾಂಸ್ಕೃತಿಕ ಭಯೋತ್ಪಾದನೆ ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com