ಆಧಾರ್ ಚೀಟಿ ಬಳಕೆ ತೀರ್ಪಿಗೆ ತಿದ್ದುಪಡಿ ತಂದ ಸುಪ್ರೀಂ ಕೋರ್ಟ್

ಆಧಾರ್ ಚೀಟಿ ಬಳಕೆಯ ಬಗ್ಗೆ ಈ ಹಿಂದೆ ನೀಡಿದ್ದ ತೀರ್ಪಿಗೆ ಗುರುವಾರ ತಿದ್ದುಪಡಿ ಮಾಡಿರುವ ಸುಪ್ರೀಂ ಕೋರ್ಟ್ ಸಾಮಾಜ ಕಲ್ಯಾಣ ಯೋಜನೆಗಳಾದ ನರೇಗ (MNREGA),
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆಧಾರ್ ಚೀಟಿ ಬಳಕೆಯ ಬಗ್ಗೆ ಈ ಹಿಂದೆ ನೀಡಿದ್ದ ತೀರ್ಪಿಗೆ ಗುರುವಾರ ತಿದ್ದುಪಡಿ ಮಾಡಿರುವ ಸುಪ್ರೀಂ ಕೋರ್ಟ್ ಸಾಮಾಜ ಕಲ್ಯಾಣ ಯೋಜನೆಗಳಾದ ನರೇಗ (MNREGA), ಪಿಂಚಣಿ, ಪ್ರಾವಿಡೆಂಟ್ ಫಂಡ್ ಮತ್ತು ಪ್ರಧಾನ ಮಂತ್ರಿಯವರ ಜನ ಧನ ಯೋಜನೆಗಳಿಗೆ ಸ್ವಯಂಪ್ರೇರಿತವಾಗಿ ಆಧಾರ್ ಕಾರ್ಡ್ ಬಳಕೆಗೆ ಅನುಮತಿ ನೀಡಿದೆ.

ಈ ಹಿಂದೆ ಆಗಸ್ಟ್ ೧೧ ರಂದು ನೀಡಿದ್ದ ತೀರ್ಪಿನಲ್ಲಿ ಸಾರ್ವಜನಿಕ ವಿತರಣಾ ಯೋಜನೆಯಡಿ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ಪಡೆಯಲು ಹಾಗು ಎಲ್ ಪಿ ಜಿ ಸಿಲಿಂಡರ್ ಪಡೆಯಲು ಮಾತ್ರ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶ ನೀಡಿತ್ತು. ಕೇಂದ್ರ ಸರ್ಕಾರ ಮತ್ತು ಇತರ ಏಜೆನ್ಸಿಗಳು ಸಲ್ಲಿಸಿದ್ದ ಅರ್ಜಿಯ ಮರುವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು ಅವರ ಮುಖಂಡತ್ವದ ಸಾಂವಿಧಾನಿಕ ಪೀಠ ಈ ಹೊಸ ತಿದ್ದುಪಡಿಯನ್ನು ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com