ರಾಮನವಮಿ ದಿನವೂ ಅತ್ಯಾಚಾರ

ಶ್ರೀರಾಮನ ಅಪರಾವತಾರದಂತೆ ಹೊರಗೆ ಭಕ್ತರಿಗೆ ನೀತಿ ಪಾಠ ಹೇಳುತ್ತಿದ್ದ ಹೊಸನಗರ ರಾಘವೇಶ್ವರ ಸ್ವಾಮಿ ಕೊಠಡಿಯಲ್ಲಿ ಅಕ್ಷರಶಃ ಮೃಗದಂತೆ ವರ್ತಿಸುತ್ತಿದ್ದರು...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
Updated on

ಬೆಂಗಳೂರು: ಶ್ರೀರಾಮನ ಅಪರಾವತಾರದಂತೆ ಹೊರಗೆ ಭಕ್ತರಿಗೆ ನೀತಿ ಪಾಠ ಹೇಳುತ್ತಿದ್ದ ಹೊಸನಗರ ರಾಘವೇಶ್ವರ ಸ್ವಾಮಿ ಕೊಠಡಿಯಲ್ಲಿ ಅಕ್ಷರಶಃ ಮೃಗದಂತೆ ವರ್ತಿಸುತ್ತಿದ್ದರು.

ಶಿವರಾತ್ರಿ, ರಾಮನವಮಿಯ ದಿನವೂ ದೇವರ ಹೆಸರಿನಲ್ಲಿ ನೊಂದ ಪ್ರೇಮಲತಾರನ್ನು ದೇವರ ಶಾಪದ ಹೆಸರಿನಲ್ಲಿ ಭೀತಿಗೊಳಿಸಿ ನಿರಂತರ ಅತ್ಯಾಚಾರ ಎಸಗುತ್ತಿದ್ದರು. ರಾಮಕಥಾ ಕಾರ್ಯಕ್ರಮಕ್ಕೆಂದು ಬೇರೆ ಬೇರೆ ಊರುಗಳಿಗೆ ತೆರಳಿದಾಗ ಕೊಠಡಿಯಲ್ಲಿ ನೊಂದ ಮಹಿಳೆ ಋತುಸ್ರಾವದಲ್ಲಿದ್ದರೂ ಬಿಡದೆ ಅತ್ಯಾಚಾರ ಎಸಗಿದ್ದಾರೆ. ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ಪ್ರತಿ ಇದೀಗ ಲಭ್ಯವಾಗಿದ್ದು, ಮೈ ಮೇಲೆ ಕಾವಿ ಧರಿಸಿದ ರಾಘವೇಶ್ವರ ಸ್ವಾಮೀಜಿ ಅದೇ ವಸ್ತ್ರದಲ್ಲೇ ಮಹಿಳೆ ಮೇಲೆ ವ್ಯಾಘ್ರನಂತೆ ಮುಗಿ ಬೀಳುತ್ತಿದ್ದರು ಎಂದು ಅದರಲ್ಲಿ ಪ್ರೇಮಲತಾ ಹೇಳಿಕೆ ನೀಡಿದ್ದಾರೆ.

2011 ನೇ ಇಸವಿಯ ನ.20 ರಂದು ನಾನು ಸುಗಮ ಸಂಗೀತ ಗಾಯಕಿಯಾಗಿದ್ದು ದೆಹಲಿಗೆ ಹಾಡಲು ಹೋಗಿದ್ದೆ. ಆ ಸಮಯದಲ್ಲಿ ಸ್ವಾಮೀಜಿ ಹೃಷಿಕೇಷದಲ್ಲಿದ್ದರು. ಅಲ್ಲಿಂದ ದೂರವಾಣಿ ಕರೆ ಮಾಡಿ, ನೀನು ದೆಹಲಿಯವರೆಗೆ ಬಂದಿದ್ದೀಯಾ. ಹೃಷಿಕೇಷಕ್ಕೆ ಬರಬೇಕು ಎಂದು ನನಗೆ ಒತ್ತಾಯ ಮಾಡಿದರು. ಆದ್ದರಿಂದ ನಾನು ಅಲ್ಲಿಗೆ ಹೋದೆ. ಪರಮಾರ್ಥನಿಕೇತನದವರ ಒಂದು ಆಶ್ರಮದಲ್ಲಿ ಸ್ವಾಮೀಜಿಯವರು ಇದ್ದ ಕಟ್ಟಡದ ಪಕ್ಕದಲ್ಲಿಯೇ ನನಗೆ ಇರಲು ವ್ಯವಸ್ಥೆ ಮಾಡಿಕೊಟ್ಟರು. ನಾನು ಅಲ್ಲಿಗೆ ದಿ.21 ರಂದು ಹೋಗಿದ್ದೆ. ಮರು ದಿನ ಗಂಗಾಸ್ನಾನವನ್ನು
ಮಾಡಿ ಅವರನ್ನು ಭೇಟಿಯಾಗಬೇಕು ಎಂದು ತಿಳಿಸಿದರು. ಆ ಪ್ರಕಾರ ನಾನು ಹೋದೆ. ಸ್ವಾಮೀಜಿಯವರು ನನಗೆ ದುರ್ಗಾಸಪ್ತಶತಿ ಉಪದೇಶ ಮಾಡುತ್ತೇವೆ ಎಂದು ಹೇಳಿ ನನ್ನನ್ನು ಕರೆಸಿಕೊಂಡರು. ಅಲ್ಲಿಯೂ ರಾಮನಿಗೆ ನಮಸ್ಕಾರ ಮಾಡಿದ ನಂತರ ನನಗೆ ರಾಮಪ್ರಸಾದ ಕೊಟ್ಟಿದ್ದರು. ಅವರು ತನ್ನ ಐ ಪ್ಯಾಡ್ಧಿನಲ್ಲಿ ತಂಬೂರ ಶೃತಿಯನ್ನು ಹಾಕಿಸಿಕೊಂಡು
ಅವರು ನನಗೆ ಕಣ್ಣುಮುಚ್ಚಿಕೊಂಡು ಇರಲು ಹೇಳಿದರು.

ನಾನು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾಗ, ನಡು ನಡುವೆ ಕೆನ್ನೆ, ಭುಜ, ಸೊಂಟ ಮತ್ತು ಖಾಸಗಿ ಭಾಗಗಳನ್ನು ಮುಟ್ಟಿ ಉದ್ರೇಕಪಡಿಸಿದರು. ನನಗೆ ಕಣ್ಣು ತೆಗೆಯಬೇಕಾ ಅಥವಾ ಮಾತನಾಡಬೇಕಾ ಎಂಬುವುದು ಗೊತ್ತಾಗುತ್ತಿರಲಿಲ್ಲ. ನಾನು ಕೂತಲ್ಲೇ ಹಿಂದಕ್ಕೆ ತಳ್ಳಿ ನನ್ನ ಮೇಲೆ ಬಲತ್ಕಾರ ಮಾಡಿದರು. ಆ ಸಮಯದಲ್ಲಿ ನನ್ನ ತಲೆಗೆ ವ್ಯತ್ಯಾಸ ಆಗುವುದು
ಗೊತ್ತಾಗುತ್ತಿತ್ತು. ವೈದ್ಯಕೀಯ ಪರೀಕ್ಷೆ:ಬೆಂಗಳೂರಿಗೆ ವಾಪಸಾದಾಗ ಯೂರಿನರಿ ಇನ್ಫೆಕ್ಷನ್ ಆಗಿತ್ತು. ಮುಟ್ಟಿನ ದಿನದಲ್ಲಿ ವ್ಯತ್ಯಾಸವಾಯಿತು. ಈ ವಿಷಯವನ್ನು ಗಾಬರಿಯಲ್ಲಿ
ಸ್ವಾಮೀಜಿಗೆ ತಿಳಿಸಿದೆ. ಆಗ ಅವರು ಸಮಾಧಾನ ಮಾಡಿ ಹಾಗೇ ಆಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೋ, ಆ ರೀತಿ ಆಗಿಲ್ಲಾ ಎಂದಾದರೆ ನಾವೆಲ್ಲರೂ ತಿರುಪತಿಗೆ ಹೋಗುವ ಎಂದು ಹೇಳಿದರು. ನಾನೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡೆ ಅದರಲ್ಲಿ ನೆಗೆಟಿವ್ ಬಂತು. ಅದನ್ನು ಸ್ವಾಮೀಜಿಗೆ ತಿಳಿಸಿದೆ.

2012 ಫೆಬ್ರವರಿ ಪ್ರಯುಕ್ತ ಗೋಕರ್ಣದಲ್ಲಿ 3 ದಿನಗಳ ಕಾಲ ರಾಮಕಥಾ ಕಾರ್ಯಕ್ರಮ ಇದ್ದು ಅವರ ಪರಿವಾರದವರು ನನಗೆ ಕರೆ ಮಾಡಿ ಅಲ್ಲಿಗೆ ಕರೆದರು. ಅಲ್ಲಿ ಇದ್ದ ಎಲ್ಲಾ ದಿನಗಳಲ್ಲೂ
ಸ್ವಾಮೀಜಿಯವರು ನನ್ನ ಮೇಲೆ ಅತ್ಯಾಚಾರ ಮಾಡಿದರು. ಶಿವರಾತ್ರಿಯ ದಿನ ಮಧ್ಯಾಹ್ನ ನನ್ನನ್ನು ಕರೆಸಿಕೊಂಡು ಅತ್ಯಾಚಾರ ಮಾಡಿದರು. ಅದೇ ದಿನ ರಾತ್ರಿ ನನಗೆ ಒಂದು ಮಂತ್ರ ಉಪದೇಶ ಮಾಡುತ್ತೇನೆ. ಆದ್ದರಿಂದ ಬರಬೇಕು ಎಂದು ಹೇಳಿ ರಾತ್ರಿ ಪುನಃ ನನ್ನನ್ನು ಕರೆಸಿಕೊಂಡು ಮಂತ್ರ ಹೇಳಿಕೊಟ್ಟು ಸ್ವಲ್ಪ ಹೊತ್ತಿನವರೆಗೆ ಧ್ಯಾನ ಮಾಡಿಸಿ ನನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದರು. ಗೋಕರ್ಣದಲ್ಲಿದ್ದಾಗ ಅನಾರೋಗ್ಯ ಹಾಗೂ ರಕ್ತಸ್ರಾವ ಇದ್ದರೂ ಸಹ ಕೊಣೆಗೆ ಕರಿಸಿಕೊಂಡು ಒತ್ತಾಯಪೂರ್ವಕವಾಗಿ ಅತ್ಯಾಚಾರ ಮಾಡಿದರು.

2012ರ ಮಾರ್ಚ್ 21ರಿಂದ ಏಪ್ರಿಲ್ 22 ರವರೆಗೆ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ರಾಮನವಮಿ ಪ್ರಯುಕ್ತ 10 ದಿನಗಳ ಕಾಲ ರಾಮಕಥಾ ಕಾರ್ಯಕ್ರಮ ಇತ್ತು. ಆಗ ನನಗೆ ಅನಾರೋಗ್ಯ ಎಂಬ ವಿಷಯ ತಿಳಿಸಿದೆ. ಆದರೂ ಒತ್ತಾಯಪೂರ್ವಕವಾಗಿ ಮೀಟಿಂಗ್ ಗೆ ಬರಬೇಕು ಎಂದು ಕರೆಸಿಕೊಂಡು ರಕ್ತಸ್ರಾವ ಆಗುತ್ತಿದ್ದರೂ ಅತ್ಯಾಚಾರ ಮಾಡಿದರು. ನನ್ನ ಮೈ ಕೈ ಕಾಲುಗಳಿಗೆ ತುಂಬಾ ನೋವು ಆಯಿತು. ಹೀಗಾಗಿ, ಸಾಗರದ ವೈದ್ಯರ ಹತ್ತಿರ ಚಿಕಿತ್ಸೆ ಪಡೆದೆ. ಎಲ್ಲ ದಿನಗಳಲ್ಲೂ ಅದೇ ರೀತಿ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಆರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com