ವೇದಗಳಿಂದ ದಾಧ್ರಿ ಘಟನೆಯನ್ನು ಸಮರ್ಥಿಸಿಕೊಂಡ ಆರ್ ಎಸ್ ಎಸ್ ಮುಖವಾಣಿ

ಭೀಫ್ ತಿಂದ ಎಂದು ಶಂಕಿಸಿ ಉತ್ತರ ಪ್ರದೇಶದ ದಾಧ್ರಿಯಲ್ಲಿ ಅಖಲಕ್ ಸೈಫಿ ಎಂಬುವವರನ್ನು ಅಮಾನುಷವಾಗಿ ಕೊಲೆ ಮಾಡಿದ ಒಂದು ಕೋಮಿನ ಗುಂಪಿನ ನಡೆಯನ್ನು ಆರ್ ಎಸ್ ಎಸ್ ಮುಖವಾಣಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭೀಫ್ ತಿಂದ ಎಂದು ಶಂಕಿಸಿ ಉತ್ತರ ಪ್ರದೇಶದ ದಾಧ್ರಿಯಲ್ಲಿ ಅಖಲಕ್ ಸೈಫಿ ಎಂಬುವವರನ್ನು ಅಮಾನುಷವಾಗಿ ಕೊಲೆ ಮಾಡಿದ ಒಂದು ಕೋಮಿನ ಗುಂಪಿನ ನಡೆಯನ್ನು ಆರ್ ಎಸ್ ಎಸ್ ಮುಖವಾಣಿ 'ಪಾಂಚಜನ್ಯ' ಎಂಬ ಪತ್ರಿಕೆಯ ಮುಖಪುಟ ಲೇಖನದಲ್ಲಿ ಸಮರ್ಥಿಸಿಕೊಳ್ಳುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದೆ.

ಆಂಗ್ಲ ದಿನಪತ್ರಿಕೆಯೊಂದರ ವರದಿಯ ಪ್ರಕಾರ ಉತ್ತರ ಪ್ರದೇಶದ ಈ ಮುಸ್ಲಿಮನನ್ನು ಅಮಾನವೀಯವಾಗಿ ಕೊಂದ ಘಟನೆಯನ್ನು ವೇದಗಳ ಕೆಲವು ಶ್ಲೋಕಗಳನ್ನು ಉದಾಹರಿಸುವ ಮೂಲಕ ಆರ್ ಎಸ್ ಎಸ್ ಪತ್ರಿಕೆ ಸಮರ್ಥಿಸಿಕೊಂಡಿದೆ.

ಆರ್ ಎಸ್ ಎಸ್ ಮುಖವಾಣಿ ಪಾಂಚಜನ್ಯ ಪತ್ರಿಕೆಯ ಪ್ರಕಾರ ಗೋಹತ್ಯೆ ಮಾಡುವವರು ಪಾಪಿಗಳು ಮತ್ತು ಅವರನ್ನು ಕೊಲ್ಲಬೇಕೆಂದು ವೇದಗಳು ತಿಳಿಸಿದೆ ಎಂದು ಬರೆಯಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

"ವೇದಗಳು ಗೋಹತ್ಯೆ ಮಾಡುವ ಪಾಪಿಗಳನ್ನು ಕೊಲ್ಲುವಂತೆ ಹೇಳುತ್ತದೆ" ಎಂದು 'ಈ ದಾಂಧಲೆಯ ಇನ್ನೊಂದು ಮುಖ' ಎಂಬ ಲೇಖನದ ಬರಹಗಾರ ತುಫೈಲ್ ಚತುರ್ವೇದಿ ಬರೆದಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಕೋಮು ದ್ವೇಷ, ಬರಹಗಾರಾರ ಮೇಲಿನ ಹಲ್ಲೆ ಮತ್ತು ಕೇಂದ್ರ ಸರ್ಕಾರ ತೋರಿರುವ ಮೌನವನ್ನು ವಿರೋಧಿಸಿ ೪೦ ಕ್ಕೂ ಹೆಚ್ಚು ಸಾಹಿತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com