ರಾಜ್ಯದಲ್ಲಿ ಮ್ಯಾಗಿ ಮೇಲಿನ ನಿಷೇಧ ವಾಪಾಸ್‌

ವಿಷಕಾರಿ ಸೀಸದ ಅಂಶಗಳ ಬಗ್ಗೆ ಸಾಕಷ್ಟು ಆತಂಕ ಹುಟ್ಟಿಸಿದ್ದ ನೆಸ್ಲೆ ಕಂಪನಿಯ ಮ್ಯಾಗಿ ನ್ಯೂಡಲ್ಸ್‌ ಮಾರಾಟದ ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂಪಡೆಯಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಷಕಾರಿ ಸೀಸದ ಅಂಶಗಳ ಬಗ್ಗೆ ಸಾಕಷ್ಟು ಆತಂಕ ಹುಟ್ಟಿಸಿದ್ದ ನೆಸ್ಲೆ ಕಂಪನಿಯ ಮ್ಯಾಗಿ ನ್ಯೂಡಲ್ಸ್‌ ಮಾರಾಟದ ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮ್ಯಾಗಿ ನೂಡಲ್ಸ್ ನಲ್ಲಿ ಅಪಾಯಕಾರಿ ಮೋನೋ ಸೋಡಿಯಂ ಗ್ಲುಟಾಮ್ಯಾಟ್ ಮತ್ತು ಸೀಸದ ಪ್ರಮಾಣ ಹೆಚ್ಚಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮ್ಯಾಗಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೆ, ಈ ತನಕ ನಡೆಸಿದ ಪರೀಕ್ಷೆಗಳಿಂದ ಮ್ಯಾಗಿಯಲ್ಲಿ ಯಾವುದೇ ಅಪಾಯಕಾರಿ ಅಂಶಗಳು ಕಂಡುಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಮ್ಯಾಗಿ ಮೇಲಿದ್ದ ನಿಷೇಧವನ್ನು ತೆರವುಗೊಳಿಸಲು ಸರ್ಕಾರ ನಿರ್ಧರಿಸಿದೆ.

ಕಳೆದ ಜೂನ್‌ ತಿಂಗಳಲ್ಲಿ ಅತಿಯಾದ ಸೀಸದ ಅಂಶ ಪತ್ತೆಯಾದಕಾರಣಕ್ಕಾಗಿ  ದೇಶದ ಹಲವು ರಾಜ್ಯಗಳು ಮತ್ತು ಕರ್ನಾಟಕದಲ್ಲೂ ಮ್ಯಾಗಿ ಮೇಲೆ ನಿಷೇಧ ಹೇರಲಾಗಿತ್ತು.

ರಾಜ್ಯದಲ್ಲಿ ಸರ್ಕಾರಿ ಪ್ರಯೋಗಾಲಯಗಳಲ್ಲದೆ, ಖಾಸಗಿ ಪ್ರಯೋಗಾಲಯಗಳಲ್ಲೂ ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಎಂಎಸ್‌ಜಿ ಪ್ರಮಾಣ ಸರಿಯಾಗಿಯೇ ಇದೆ ಎಂಬ ವರದಿ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com