ಮೊದಲು ಗುಲಾಮಗಿರಿ ಭಾಷೆ ಬಿಡಿ: ಸಚಿವ ಚಿಂಚನಸೂರ್‌ಗೆ ಸಿಎಂ ತರಾಟೆ

ಸಚಿವ ಸ್ಥಾನ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿರುವ ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು...
ಬಾಬುರಾವ್ ಚಿಂಚನಸೂರ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸಿದ್ದರಾಮಯ್ಯ
ಬಾಬುರಾವ್ ಚಿಂಚನಸೂರ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸಿದ್ದರಾಮಯ್ಯ

ನವದೆಹಲಿ: ಸಚಿವ ಸ್ಥಾನ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿರುವ ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಎದುರೇ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು.

ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಕರ್ನಾಟಕ ಭವನಕ್ಕೆ ಆಗಮಿಸಿದರು. ಈ ವೇಳೆ ಸಿಎಂಗಾಗಿ ಕಾಯುತ್ತಿದ್ದ ಚಿಂಚನಸೂರ್ ಅವರು, ನಮ್ಮ ನೇತಾಗಾಗಿ ಕಾಯುತ್ತಿದ್ದೇನೆ ಎಂದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ, ಮೊದಲು ಗುಲಾಮಗಿರಿ ಭಾಷೆ ಬಳಸುವುದನ್ನು ಬಿಡಿ ಎಂದು ಖಡಕ್ ಆಗಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಕೋಪಕ್ಕೆ ಸಚಿವರ ವರ್ತನೆ ಕಾರಣವಾಗಿದ್ದು, ಚಿಂಚನಸೂರ್ ಅವರನ್ನು ತಮ್ಮ ಸಚಿವ ಸಂಪುಟದಿಂದ ಕೈಬಿಡಲು ಸಿಎಂ ನಿರ್ಧರಿಸಿದ್ದರು. ಆದರೆ ಬಾಬೂರಾವ್ ಚಿಂಚನಸೂರ್ ಅವರು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಮನವೊಲಿಸಿ, ಸಚಿವ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಖರ್ಗೆ ಅವರು ಚಿಂಚನಸೂರ್ ಪರ ನಿಂತಿರುವುದರಿಂದ, ಅವರನ್ನು ಕೈಬಿಡದಂತೆ ದಿಗ್ವಿಜಯ್ ಸಿಂಗ್ ಸಿಎಂಗೆ ಸೂಚಿಸಿದ್ದರು. ಹೀಗಾಗಿ ಚಿಂಚನಸೂರ್ ಮೇಲೆ ಸಿಎಂಗೆ ಕೊಪ ಇತ್ತು. ಆ ಕೋಪವನ್ನು ಈ ಮೂಲಕ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com