ಲುಂಗಿ ಮೇಲೆತ್ತಿ ಕಟ್ಟಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

೨೨ ವರ್ಷದ ದಲಿತ ಯುವಕನೊಬ್ಬ ತನ್ನ ಲುಂಗಿಯನ್ನು ಕಾಲ್ಬೆರಳು ಕಾಣದಂತೆ ಮುಚ್ಚಿ ಇಳೆ ಬಿಡದೆ ಮೇಲೆತ್ತಿ ಕಟ್ಟಿಕೊಂಡು ಕುಲಸೇಕರಪಟ್ಟಿನಂನ ಹಿಂದೂ ಉಚ್ಛಜಾತಿಯ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತೂತುಕುಡಿ: ೨೨ ವರ್ಷದ ದಲಿತ ಯುವಕನೊಬ್ಬ ತನ್ನ ಲುಂಗಿಯನ್ನು ಕಾಲ್ಬೆರಳು ಕಾಣದಂತೆ ಮುಚ್ಚಿ ಇಳೆ ಬಿಡದೆ ಮೇಲೆತ್ತಿ ಕಟ್ಟಿಕೊಂಡು ಕುಲಸೇಕರಪಟ್ಟಿನಂನ ಹಿಂದೂ  ಉಚ್ಛಜಾತಿಯ ಬೀದಿಯನ್ನು ಹಾದುಹೋದನೆಂದು ದೂರಿ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಹಿನ್ನಲೆಯಲ್ಲಿ ಐವರನ್ನು ಬಂಧಿಸಲಾಗಿದೆ.

ತಿರುವನೇಲಿ ಜಿಲ್ಲೆಯ ಮುನೈಂಚಿಪಟ್ಟಿಯ, ಮುನೈಂಡಿ ಎಂದು ಸಂತ್ರಸ್ತನನ್ನು ಗುರುತಿಸಲಾಗಿದೆ. ಇವರು ದಸರಾ ಹಬ್ಬದ ಸಂಭ್ರಮಕ್ಕೆ ಕುಲಸೇಕರಪಟ್ಟಿನಂ ಬೀಚಿನಲ್ಲಿದ್ದಾಗ ದುರೈ, ಆನಂದ್, ಚೆಲ್ಲ, ಸಮ್ಮುಕುಟ್ಟಿ ಮತ್ತು ಎಸಾಕಿದುರೈ ಎಂಬ ಐವರು ಇವರ ಮೇಲೆ ದಾಳಿ ನಡೆಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಮುನೈಂಡಿಯನ್ನು ಕರೆದೊಯ್ದು ಪಿವಿಸಿ ಪೈಪುಗಳಿಮ್ದ ಥಳಿಸಿದ್ದಾರೆ. ಮುನೈಂಡಿಯವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಅವರು ನೀಡಿದ ದೂರಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮೇಲಿನ ಹಲ್ಲೆ ತಡೆ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಮುನೈಂಡಿ ಪಾಠ ಕಲಿಸಲು ತಾವು ಕಾಯುತ್ತಿದ್ದಾಗಿ ಈ ಹಿಂದೂ ಉಚ್ಚ ಜಾತಿಯ ಯುವಕರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದು ಹಿಂದೂ  ಉಚ್ಛ ಜಾತಿಯವರು ವಾಸಿಸುವ ಬೀದಿಗಳಲ್ಲಿ ನಡೆಯುವಾಗ ಲುಂಗಿ ಎತ್ತಿ ಕಟ್ಟದಿರಲು ಉಳಿದ ದಲಿತರಿಗೂ ಬೆದರಿಕೆ ಹಾಕಿದ್ದಾರೆ ಎಂದು ಕೂಡ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com