ರಾಷ್ಟ್ರಪ್ರಶಸ್ತಿ ಹಿಂದಿರುಗಸಲಿರುವ ಎಫ್ ಟಿ ಐ ಐ ಪದವೀಧರರು

ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯ ವಾತಾವರಣವನ್ನು ವಿರೋಧಿಸಿ ತಮ್ಮ ರಾಷ್ಟ್ರಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವುದಾಗಿ ಮೂವರು ಎಫ್ ಟಿ ಐ ಐ ಪದವೀಧರರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯ ವಾತಾವರಣವನ್ನು ವಿರೋಧಿಸಿ ತಮ್ಮ ರಾಷ್ಟ್ರಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವುದಾಗಿ ಮೂವರು ಎಫ್ ಟಿ ಐ ಐ ಪದವೀಧರರು ಘೋಷಿಸಿದ್ದಾರೆ.

ಪ್ರಶಸ್ತಿ ಹಿಂದಿರುಗಿಸುತ್ತಿರುವವರು ಮಹಾರಾಷ್ಟ್ರದ ವಿಕ್ರಾಂತ್ ಪವಾರ್, ಉತ್ತರ ಪ್ರದೇಶದ ರಾಕೇಶ್ ಶುಕ್ಲಾ ಮತ್ತು ಗೋವಾದ ಪ್ರತೀಕ್ ವತ್ಸ್. ಬಿಜೆಪಿ ಪಕ್ಷದ ಸದಸ್ಯ ಗಜೇಂದ್ರ ಚೌಹಾನ್ ಅವರನ್ನು ಎಫ್ ಟಿ ಐ ಐ ನಿರ್ದೇಶಕರಾಗಿ ನೇಮಕ ಮಾಡಿದ್ದ ನಡೆಯನ್ನು ವಿರೋಧಿಸಿ ಎಫ್ ಟಿ ಐ ಐ ವಿದ್ಯಾರ್ಥಿಗಳು ನಡೆಸುತ್ತಿದ್ದ ಧರಣಿಯನ್ನು ಕೊನೆಗೊಳಿಸಿ ತರಗತಿಗಳಿಗೆ ಹಿಂದಿರುಗುವುದಾಗಿ ತಿಳಿಸಿ ಆದರೆ ಶಾಂತಿಯುತ ಪ್ರತಿಭಟನೆಗಳು ಮುಂದುವರೆಸುವುದಾಗಿ ಘೋಷಿಸಿದ ಕೆಲವೇ ಘಂಟೆಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.

೨೦೧೨ ರಲ್ಲಿ ಅತ್ಯುತ್ತಮ ಶಾರ್ಟ್ ಸಿನೆಮಾ ವಿಭಾಗದಲ್ಲಿ ಪವಾರ್ 'ಕಾತಲ್' ಸಿನೆಮಾಗೆ ರಾಷ್ಟ್ರಪತಿಗಳ ಚಿನ್ನದ ಪದಕ ಪಡೆದಿದ್ದರು. ಶುಕ್ಲಾ ಅವರು ತಮ್ಮ ಸಿನೆಮಾ 'ಡಾಂಕಿ ಫೇರ್' ಗೆ ೨೦೧೩ ರಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಚಲನಚಿತ್ರೋತ್ಸವದಲ್ಲಿ ವಿಶೇಷ ಅರ್ಹತೆ ಪ್ರಶಸ್ತಿ ಪಡೆದಿದ್ದರು. ವತ್ಸ್ ಅವರು ೨೦೧೦ ರಲ್ಲಿ ರಜತ ಕಮಲ ಪಡೆದಿದ್ದರು.

ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಹಲವಾರು ವಿಚಾರವಾದಿ ಸಾಹಿತಿಗಳ ಕೊಲೆಯನ್ನು ವಿರೋಧಿಸಿ ಪ್ರಶಸ್ತಿ ಹಿಂದಿರುಗಿಸುತ್ತಿರುವ ಸಾಹಿತಿಗಳು, ಬುದ್ಧಿಜೀವಿಗಳನ್ನು ಈಗ ಚಲನಚಿತ್ರ ನಿರ್ದೇಶಕರೂ ಸೇರಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com