
ಮುಂಬಯಿ: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೆಹಮೂದ್ ಕಸೂರಿ ಅವರ ಪುಸ್ತಕ ಬಿಡುಗಡೆ ಸಂದರ್ಭ ಮುಂಬಯಿಯಲ್ಲಿ ಶಿವಸೇನಾ ಕಾರ್ಯಕರ್ತರಿಂದ ಮಸಿ ದಾಳಿಗೆ ಒಳಗಾಗಿದ್ದ ಮಾಜಿ ಉಪ ಪ್ರಧಾನಿ ಎಲ್ ಕೆ.ಆಡ್ವಾಣಿ ಅವರ ಮಾಜಿ ಆಪ್ತ ಸುಧೀಂದ್ರ ಕುಲಕರ್ಣಿ ಅವರು ಅದೇ ಪುಸ್ತಕ ಬಿಡುಗೆಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ.
ನಾನು ಕಸೂರಿ ಅವರ ಆಹ್ವಾನವನ್ನು ಸ್ವೀಕರಿಸಿದ್ದು ,ನವೆಂಬರ್ 2 ರಂದು ಕರಾಚಿಯಲ್ಲಿ ನಡೆಯಲಿರುವ 'ನೈದರ್ ಎ ಹಾಕ್, ನಾರ್ ಎ ಡವ್: ಆ್ಯನ್ ಇನಸೈಡರ್ ಅಕೌಂಟ್ ಆಫ್ ಪಾಕಿಸ್ತಾನ್ಸ್ ಫಾರಿನ್ ಪಾಲಿಸಿ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಾಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಕುಲಕರ್ಣಿ ಹೇಳಿದ್ದಾರೆ.
ಶಿವಸೇನೆಯ ತೀವ್ರ ವಿರೋಧದ ನಡುವೆಯೂ ಕಸೂರಿ ಅವರ 'ನೈದರ್ ಎ ಹಾಕ್, ನಾರ್ ಎ ಡವ್' ಪುಸ್ತಕ ಅಕ್ಟೋಬರ್ 12ರಂದು ಮುಂಬಯಿಯಲ್ಲಿ ಬಿಡುಗಡೆಯಾಗಿತ್ತು. ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿರೋಧಿಸಿ ಶಿವಸೇನೆಯ ಕೆಲವು ಕಾರ್ಯಕರ್ತರು ಕುಲಕರ್ಣಿ ಅವರ ಮುಖಕ್ಕೆ ಮಸಿ ಬಳಿದಿದ್ದರು.
Advertisement