ಕಲ್ಬುರ್ಗಿ ಕೊಲೆ ವಿರೋಧಿಸಿ ಅಕಾಡೆಮಿ ಪ್ರಶಸ್ತಿ ಹಿಂದುರಿಗಿಸಿದ ಹಿಂದಿ ಲೇಖಕ

ಸತ್ಯ ನುಡಿಯುವುದರಿಂದ ಅಪಾಯ ಇದ್ದರೂ ಮೌನಕ್ಕೆ ಶರಣಾಗಲು ಸಾಧ್ಯವಿಲ್ಲ ಎಂದಿರುವ ಹಿಂದಿ ಸಾಹಿತಿ, ಕವಿ, ಪತ್ರಕರ್ತ ಉದಯ್ ಪ್ರಕಾಶ್ ಅವರು ಸಾಹಿತಿ ಎಂ ಎಂ ಕಲ್ಬುರ್ಗಿ
ಹಿಂದಿ ಲೇಖಕ ಉದಯ್ ಪ್ರಕಾಶ್, ಚಿತ್ರಕೃಪೆ: ಫೇಸ್ಬುಕ್ ಪುಟ
ಹಿಂದಿ ಲೇಖಕ ಉದಯ್ ಪ್ರಕಾಶ್, ಚಿತ್ರಕೃಪೆ: ಫೇಸ್ಬುಕ್ ಪುಟ

ನವದೆಹಲಿ: ಸತ್ಯ ನುಡಿಯುವುದರಿಂದ ಅಪಾಯ ಇದ್ದರೂ ಮೌನಕ್ಕೆ ಶರಣಾಗಲು ಸಾಧ್ಯವಿಲ್ಲ ಎಂದಿರುವ ಹಿಂದಿ ಸಾಹಿತಿ, ಕವಿ, ಪತ್ರಕರ್ತ ಉದಯ್ ಪ್ರಕಾಶ್ ಅವರು ಸಾಹಿತಿ ಎಂ ಎಂ ಕಲ್ಬುರ್ಗಿ ಅವರ ಕೊಲೆಯ ವಿರುದ್ಧ ಪ್ರತಿಭಟಿಸಿ ತಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.

ದೆಹಲಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಉದಯ್, ಮುಂದಿನ ವಾರ ದೆಹಲಿಗೆ ಬಂದು ಸಾಹಿತ್ಯ ಅಕಾಡೆಮಿಗೆ ಪ್ರಶಸ್ತಿ ಫಲಕ ಮತ್ತು ಒಂದು ಲಕ್ಷ ರೂ ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.

ಈ ಹೀನ ಕೃತ್ಯದಿಂದ ನೊಂದಿರುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಕಥಾ ಸಂಕಲನ 'ಮೋಹನ್ ದಾಸ್' ಕೃತಿಗಾಗಿ ಉದಯ್ ಅವರಿಗೆ ೨೦೧೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com