ಸಿದ್ದರಾಮಯ್ಯ
ಪ್ರಧಾನ ಸುದ್ದಿ
ಬರವಿದ್ದಾಗ ನೀರು ಹಂಚಿಕೊಳ್ಳಬೇಕೆಂಬ ತೀರ್ಪು ಇದೆ, ಇದನ್ನು ಜಯಾ ಅರ್ಥ ಮಾಡಿಕೊಳ್ಳಬೇಕು: ಸಿಎಂ
ಬರಗಾಲವಿದ್ದಾಗ ನೀರು ಹಂಚಿಕೊಳ್ಳಬೇಕು ಎಂದು ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿದೆ. ಇದನ್ನು...
ಮೈಸೂರು: ಬರಗಾಲವಿದ್ದಾಗ ನೀರು ಹಂಚಿಕೊಳ್ಳಬೇಕು ಎಂದು ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿದೆ. ಇದನ್ನು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಕಾವೇರಿ ನೀರಿಗಾಗಿ ಜಯಲಲಿತಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಬಗ್ಗೆ ಮೈಸೂರಿನಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಮಳೆ ಬಂದಾಗ ತಮಿಳುನಾಡಿಗೆ ನಾವು ಸಾಕಷ್ಟು ನೀರು ಬಿಟ್ಟಿದ್ದೇವೆ. ಆದೆ ರಾಜ್ಯದಲ್ಲಿ ಈಗ ಬರ ಇದೆ. ಬರಗಾಲವಿದ್ದಾಗ ನೀರು ಹಂಚಿಕೊಳ್ಳಬೇಕೆಂಬ ತೀರ್ಪು ಇದೆ. ಇದನ್ನು ಜಯಲಲಿತಾ ಅರ್ಥ ಮಾಡಿಕೊಳ್ಳಬೇಕು ಎಂದರು.
ಮಳೆ ಬಂದಿದ್ದರೆ ತಮಿಳುನಾಡಿಗೆ ನಾವು ನೀರು ಬಿಡುತ್ತಿದ್ದೇವು. ಆದರೆ ಕಳೆದ 40 ವರ್ಷದಿಂದ ಇರದ ಬರ ರಾಜ್ಯಕ್ಕೆ ಈ ವರ್ಷ ಬಂದಿದೆ. ಇಂತಹ ಸಂದರ್ಭದಲ್ಲಿ ನೀರು ಬಿಡಲು ಹೇಗೆ ಸಾಧ್ಯ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ