ಕಲಬುರ್ಗಿ ಹತ್ಯೆ: ಚಂಪಾ ಪಂಪ ಪ್ರಶಸ್ತಿ ವಾಪಸ್

ಕನ್ನಡ ವಿದ್ವಾಂಸ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ ಅವರ ಬರ್ಬರ ಹತ್ಯೆ ಖಂಡಿಸಿ ಕನ್ನಡದ ಸಾಹಿತಿ ಚಂದ್ರಶೇಖರ ಪಾಟೀಲ್...
ಚಂದ್ರಶೇಖರ ಪಾಟೀಲ್-ಎಂ.ಎಂ. ಕಲಬುರ್ಗಿ
ಚಂದ್ರಶೇಖರ ಪಾಟೀಲ್-ಎಂ.ಎಂ. ಕಲಬುರ್ಗಿ

ಬೆಂಗಳೂರು/ನವದೆಹಲಿ: ಕನ್ನಡ ವಿದ್ವಾಂಸ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ ಅವರ ಬರ್ಬರ ಹತ್ಯೆ ಖಂಡಿಸಿ ಕನ್ನಡದ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಪಂಪ ಪ್ರಶಸ್ತಿ ವಾಪಸ್ ನೀಡಲು ನಿರ್ಧರಿಸಿದ್ದಾರೆ.

ಸೋಮವಾರ ವಾಪಸ್ ನೀಡಲಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ ಹಿಂದಿಯ ಪ್ರಮುಖ ಲೇಖಕ ಉದಯ ಪ್ರಕಾಶ್ ಕೂಡ ತಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ. ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಉದಯ್, ತಮ್ಮ ಫೇಸ್ ಬುಕ್‍ನಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಮುಂದಿನವಾರ ದೆಹಲಿಗೆ ವಾಪಸಾಗುತ್ತಲೇ ಸರ್ಕಾರಕ್ಕೆ ಅಧಿಕೃತವಾಗಿ ತಮ್ಮ ನಿರ್ಧಾರ ತಿಳಿಸಿ ಪ್ರಶಸ್ತಿಯ ರು.1 ಲಕ್ಷ ಹಾಗೂ ಫಲಕವನ್ನು ವಾಪಸ್ ಮಾಡುವುದಾಗಿ ಹೇಳಿದ್ದಾರೆ. ಬಗ್ಗೆ ಸಹ ಲೇಖಕರೊಂದಿಗೆ ಚರ್ಚಿಸುವುದಿಲ್ಲ ಎಂದಿರುವ ಅವರು, ಇದು ತಮ್ಮ ವೈಯಕ್ತಿಕ ನಿರ್ಧಾರವಾಗಿದ್ದು, ಸ್ನೇಹಿತರು ತಮ್ಮೊಂದಿಗೆ ಕೈಜೋಡಿಸಿದರೆ ಅದಕ್ಕೆ ಅಭ್ಯಂತರವಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com