
ಪಣಜಿ: ನಿವೃತ್ತ ಸೈನಿಕರಿಗೆ ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಮಾಡುವುದು ಕಷ್ಟ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಪಣಜಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಪರಿಕ್ಕರ್, ಒಆರ್ ಒಪಿ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸದೇ ಇರುವುದನ್ನು ಟೀಕಿಸಿದ್ದ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಭರವಸೆಗಳನ್ನು ಈಡೆರಿಸಲು ತತ್ವಗಳಿಗಿಂತ ಹಣ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ನಿವೃತ್ತ ಸೈನಿಕರ ಪ್ರಮುಖ 6 ಬೇಡಿಕೆಗಳ ಪೈಕಿ ಒಆರ್ ಒಪಿಯನ್ನು ವಾರ್ಷಿಕವಾಗಿ ಪರಿಷ್ಕರಿಸುವುದೂ ಒಂದು ಬೇಡಿಕೆಯಾಗಿತ್ತು. ಕೇಂದ್ರ ಸರ್ಕಾರ ಒಆರ್ ಒಪಿಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಒಆರ್ ಒಪಿಯನ್ನು ಪರಿಷ್ಕರಿಸಲು ಬದ್ಧರಾಗಿದ್ದೇವೆ, ಆದರೆ ವಾರ್ಷಿಕವಾಗಿ ಪರಿಷ್ಕರಿಸುವುದು ಕಷ್ಟ ಎಂದು ಹೇಳಿದ್ದಾರೆ.
ಒಆರ್ ಒಪಿಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸದೇ ಇರುವುದನ್ನು ಟೀಕಿಸಿದ್ದ ರಾಹುಲ್ ಗಾಂಧಿ ಹಾಗೂ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಬಗ್ಗೆ ಮಾತನಾಡಿರುವ ಪರಿಕ್ಕರ್ ಈ ಹಿಂದಿನ ಯುಪಿಎ ಸರ್ಕಾರ ಒಆರ್ ಒಪಿ ಜಾರಿಗೆ ಕೇವಲ 500 ಕೋಟಿ ರೂಪಾಯಿ ಮೀಸಲಿಟ್ಟಿತ್ತು, ಭರವಸೆ ಈಡೇರಿಕೆ ವಿಷಯದಲ್ಲಿ ತತ್ವಗಳಿಗಿಂತ ಹಣ ಮುಖ್ಯವಾಗುತ್ತದೆ ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಹಲವು ದಶಕಗಳಿಂದ ಈಡೇರದೇ ಇದ್ದ ಒಆರ್ ಒಪಿಯನ್ನು ಜಾರಿಗೊಳಿಸಿದ್ದಕ್ಕೆ ಗೋವಾ ಬಿಜೆಪಿ ಘಟಕದಿಂದ ಮನೋಹರ್ ಪರಿಕ್ಕರ್ ಅವರನ್ನು ಸನ್ಮಾನ ಮಾಡಲಾಯಿತು.
Advertisement