ದನದ ಮಾಂಸ ನಿಷೇಧ: ಪ್ರತ್ಯೇಕವಾದಿಗಳಿಂದ ಕಣಿವೆ ಸಂಪೂರ್ಣ ಬಂದ್

ಉಚ್ಛ ನ್ಯಾಯಾಲಯ ಜಮ್ಮು ಕಾಶ್ಮೀರದಲ್ಲಿ ದನದ ಮಾಂಸ ನಿಷೇಧಿಸುವಂತೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಕಣಿವೆಯಲ್ಲಿ ಸಂಪೂರ್ಣ ಬಂದ್ ನಡೆಸಲಾಗಿದೆ.
ದನದ ಮಾಂಸ ನಿಷೇಧ ವಿರೋಧಿಸಿ ಕಾಶ್ಮೀರ  ಬಂದ್
ದನದ ಮಾಂಸ ನಿಷೇಧ ವಿರೋಧಿಸಿ ಕಾಶ್ಮೀರ ಬಂದ್

ಶ್ರೀನಗರ: ಉಚ್ಛ ನ್ಯಾಯಾಲಯ ಜಮ್ಮು ಕಾಶ್ಮೀರದಲ್ಲಿ ದನದ ಮಾಂಸ ನಿಷೇಧಿಸುವಂತೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಕಣಿವೆಯಲ್ಲಿ ಸಂಪೂರ್ಣ ಬಂದ್ ನಡೆಸಲಾಗಿದೆ.

ಹುರಿಯತ್ ಕಾನ್ಫರೆನ್ಸ್ ನ ಗಿಲಾನಿ ಬಳಗ ನೀಡಿರುವ ಬಂದ್ ಕರೆಗೆ ಇತರ ಪ್ರತ್ಯೇಕವಾದಿ ನಾಯಕರು ಕೂಡ ಬೆಂಬಲ ನೀಡಿದ್ದಾರೆ.

ಎಲ್ಲ ಅಂಗಡಿ ಮುಂಗಟ್ಟುಗಳು, ಉದ್ದಿಮೆಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು, ರಸ್ತೆಗಳಿಗೆ ಸಾರ್ವಜನಿಕ ವಾಹನಗಳು ಇಳಿದಿಲ್ಲ.

ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ಪೊಲೀಸರನ್ನು ಮತ್ತು ಅರೆಮಿಲಿಟರಿ ಪಡೆಗಳನ್ನು ಪ್ರಮುಖ ಪ್ರದೇಶಗಳಲ್ಲಿ ನಿಯೋಜಿಸಿದ್ದಾರೆ.

ಬೀಫ್ ನಿಷೇಧದ ವಿರುದ್ಧದ ಪ್ರತಿಭಟನೆಗಳನ್ನು ತಡೆಯಳು ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಏರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com