ಮೂರು ಯುವಕರ ಕೊಲೆ: ಕಾಶ್ಮೀರದ ಬಾರಮುಲ್ಲಾದಲ್ಲಿ ಪ್ರತಿಭಟನೆ

ಕಾಶ್ಮೀರದ ಬಾರಮುಲ್ಲಾದ ಸೇಬು ತೋಟದಲ್ಲಿ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಶಂಕಿಸಲಾದ ಮೂವರು ಯುವಕರ ದೇಹ ಸೋಮವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಕಾಶ್ಮೀರದ ಬಾರಮುಲ್ಲಾದ ಸೇಬು ತೋಟದಲ್ಲಿ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಶಂಕಿಸಲಾದ ಮೂವರು ಯುವಕರ ದೇಹ ಸೋಮವಾರ ಪತ್ತೆಯಾದ ಹಿನ್ನಲೆಯಲ್ಲಿ ಆ ಪ್ರದೇಶದಲ್ಲಿ ಪ್ರತಿಭಟನೆಗಳು ಜರುಗಿವೆ.

ಸೋಫೋರ್ ಮತ್ತು ಬಾರಾಮುಲ್ಲಾ ನಗರಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಉದ್ವಿಘ್ನತೆ ಏರ್ಪಟ್ಟಿದ್ದು, ಪ್ರತಿಭಟನಾಕಾರರು ಶ್ರೀನಗರ-ಮುಜಪ್ಫರಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಪಟ್ಟನ್ ಮತ್ತು ಕ್ರೀರಿ ಪ್ರದೇಶಗಳಲ್ಲಿ ತಡೆ ಹಾಕಿದ್ದಾರೆ. ಈ ಮುಂಜಾನೆ ೧೭ ವರ್ಷದಿಂದ ೨೧ ವರ್ಷದ ನಡುವಿನ ಮೂರು ಯುವಕರ ದೇಹ ಪಟ್ಟನ್ ಗ್ರಾಮದ ಸೇಬಿನ ತೋಟದಲ್ಲಿ ಕಂಡುಬಂದ ಹಿನ್ನಲೆಯಲ್ಲಿ ಈ ಉದ್ವಿಘ್ನತೆ ಏರ್ಪಟ್ಟಿದೆ.

ಈ ಮೂವರು ಯುವಕರ ಸಾವಿನ ಸುದ್ದಿ ಜಿಲ್ಲೆಯಲ್ಲಿ ಹಬ್ಬಿದಂತೆ ಪ್ರತಿಭಟನಾಕಾರರು ಸೋಫೋರ್ ಮತ್ತು ಬಾರಾಮುಲ್ಲ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಿದ್ದಾರೆ.

ಮೃತದೇಶಗಳ ಶವಪರೀಕ್ಷೆಗಾಗಿ ಪೊಲೀಸರು ಶವಗಳನ್ನು ಬಾರಮುಲ್ಲಾ ಜಿಲ್ಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತಪಟ್ಟವರನ್ನು ಇನ್ನೂ ಗುರುತಿಸಲಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com