ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ಐರ್ಲೆಂಡ್ ಬೆಂಬಲ ಕೋರಿದ ಪ್ರಧಾನಿ ಮೋದಿ

ಐರ್ಲೆಂಡ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಐರಿಶ್ ಪ್ರಧಾನಿ ಎಂಡ ಕೆನ್ನಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಐರ್ಲೆಂಡ್ ನಲ್ಲಿ ಪ್ರಧಾನಿ ಮೋದಿ
ಐರ್ಲೆಂಡ್ ನಲ್ಲಿ ಪ್ರಧಾನಿ ಮೋದಿ

ಡುಬ್ಲಿನ್: ಐರ್ಲೆಂಡ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಐರಿಶ್ ಪ್ರಧಾನಿ ಎಂಡ ಕೆನ್ನಿ ಅವರೊಂದಿಗೆ ಮಾತುಕತೆ ನಡೆಸಿದ್ದು ಯುಎನ್ಎಸ್ ಸಿ ಸುಧಾರಣೆಗಳಿಗೆ ಐರ್ಲೆಂಡ್ ನ ಬೆಂಬಲ ಕೋರಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನಾರಣೆ ವೇಳೆ ಭಾರತ ಶಾಶ್ವತ ಸದಸ್ಯತ್ವ ಪಡೆಯುವುದಕ್ಕೆ ಐರ್ಲೆಂಡ್ ನ ಬೆಂಬಲ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸವಾಲುಗಳು ಹಾಗೂ ಯೂರೋಪ್ ಹಾಗೂ ಏಷ್ಯಾ ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
"ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಉಭಯ ರಾಷ್ಟ್ರಗಳೂ ಉತ್ತಮ ಪಾಲುದಾರಿಕೆ ಹೊಂದಿವೆ. ಸ್ಥಿರ ಅಭಿವೃದ್ಧಿಗಾಗಿ ಐರ್ಲೆಂಡ್ ನ ಕೊಡುಗೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಐರ್ಲೆಂಡ್ ನ ಮಕ್ಕಳು ಸಂಸ್ಕೃತ ಗೀತೆಗಳ ಮೂಲಕ ತಮ್ಮನ್ನು ಸ್ವಾಗತಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.   
ಭಾರತದಲ್ಲೇನಾದರೂ ಸಂಸ್ಕೃತ ಗೀತೆಗಳನ್ನು ಹಾಡಿದ್ದರೆ, ಈ ವೇಳೆಗೆ ಜಾತ್ಯಾತೀತತೆ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿತ್ತು ಎಂದು ಮೋದಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com