
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಹಗರಣದ ಎರಡನೇ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ಗುರುವಾರ ಮತ್ತೊಂದು ಜಾರ್ಜ್‌ಶೀಟ್ ಸಲ್ಲಿಸಿದೆ.
ಲೋಕಾಯುಕ್ತ ಲಂಚ ಪ್ರಕರಣ ಸಂಬಂಧ ಇಂಜಿನಿಯರ್ ಚನ್ನಬಸಪ್ಪ ಅವರು ದಾಖಲಿಸಿದ್ದ ದೂರಿನ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಇಂದು 1610 ಪುಟಗಳ ಚಾರ್ಜ್‌ಶೀಟ್ ಅನ್ನು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಲೋಕಾಯುಕ್ತ ನ್ಯಾ.ವೈ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಮತ್ತು ಇತರರು ತಮ್ಮ ಬಳಿ 20 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದರು ಎಂದು ಚನ್ನಬಸಪ್ಪ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಈ ದೂರನ್ನು ಎಸ್ಐಟಿಗೆ ಹಸ್ತಾಂತರಿಸಿತ್ತು.
ಒಟ್ಟು ನಾಲ್ಕು ಆರೋಪಿಗಳ ವಿರುದ್ಧ ಇಂದು ಜಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ ಅಶ್ವಿನ್ ರಾವ್ ಮೊದಲ ಆರೋಪಿಯಾಗಿದ್ದು, ವಿ.ಭಾಸ್ಕರ್ 2ನೇ ಆರೋಪಿ. ಅಶೋಕ್ ಕುಮಾರ್ 3ನೇ ಆರೋಪಿಯಾಗಿದ್ದರೆ, ಲೋಕಾಯುಕ್ತದ ಮಾಜಿ ಪಿಆರ್‌ಒ ಸೈಯದ್ ರಿಯಾಜ್ 4ನೇ ಆರೋಪಿಯಾಗಿದ್ದಾರೆ.
Advertisement