ರಾಘವೇಶ್ವರ ಶ್ರೀ ವಿರುದ್ಧದ 2 ಅತ್ಯಾಚಾರ ಪ್ರಕರಣಗಳು ಆಧಾರ ರಹಿತ: ಮಠ
ಬೆಂಗಳೂರು: ರಾಮಾಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧದ ಎರಡೂ ಅತ್ಯಾಚಾರ ಆರೋಪದ ಸಂಪೂರ್ಣ ಆಧಾರ ರಹಿತ ಎಂದು ಶ್ರೀ ಪರ ವಕೀಲ ಶಂಭು ಶರ್ಮಾ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಂಭು ಶರ್ಮಾ, ಶ್ರೀಗಳ ವಿರುದ್ಧದ ದೂರು ಪೂರ್ವ ನಿಯೋಜಿತ ಮತ್ತು ಅವರಿಗೆ ನಿರಂತರ ತೊಂದರೆ ಕೊಡುವ ಯತ್ನ ಇದಾಗಿದೆ ಎಂದಿದ್ದಾರೆ.
ಇಬ್ಬರು ಮಹಿಳೆಯರೂ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸ್ವಾಮೀಜಿಯಿಂದ ಪೀಠ ಕಿತ್ತುಕೊಳ್ಳಲು ನಡೆಸಿದ ವ್ಯವಸ್ಥಿತ ಸಂಚು ಇದಾಗಿದೆ ಎಂದು ಶ್ರೀಗಳ ಪರ ವಕೀಲ ಶಂಭು ಶರ್ಮಾ ದೂರಿದ್ದಾರೆ.
ಜ್ಯೋತಿಷಿಗಳ ಸಲಹೆ ಮೇರೆಗೆ ಶ್ರೀಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ .ರಾಮಚಂದ್ರಾಪುರ ಮಠದ ಮೇಲೆ ದುಷ್ಟರ ಕಣ್ಣಿದೆ. ಹಾಗಾಗಿ ಶ್ರೀಗಳ ವಿರುದ್ಧ ವ್ಯವಸ್ಥಿತವಾಗಿ ಕಪೋಲ ಕಲ್ಪಿತ ಕಥೆ ಹೆಣೆದಿದ್ದಾರೆ. ಒಂದು ಬಾರಿ ಅಂತ ಹೇಳಿದ್ರೆ ನಂಬಬಹುದು, 196 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂಬುದು ನಂಬುವ ವಿಚಾರವೇ ಎಂದು ಶರ್ಮಾ ಪ್ರಶ್ನಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ