ಮಾಹಿತಿ ಮತ್ತು ಪ್ರಸಾರ ಖಾತೆ ಅಧಿಕಾರಿಗಳನ್ನು ಭೇಟಿ ಮಾಡಲಿರುವ ಎಫ್ ಟಿ ಐ ಐ ವಿದ್ಯಾರ್ಥಿಗಳು

ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿ ಐ ಐ) ಮುಖ್ಯಸ್ಥನಾಗಿ ನಟ ಮತ್ತು ಬಿಜೆಪಿ ಧುರೀಣ ಗಜೇಂದ್ರ ಚೌಹಾನ್ ನೇಮಕಾತಿಯನ್ನು
ಧರಣಿ ನಿರತ ಎಫ್ ಟಿ ಐ ಐ ವಿದ್ಯಾರ್ಥಿಗಳ ಸಂಗ್ರಹ ಚಿತ್ರ
ಧರಣಿ ನಿರತ ಎಫ್ ಟಿ ಐ ಐ ವಿದ್ಯಾರ್ಥಿಗಳ ಸಂಗ್ರಹ ಚಿತ್ರ

ಮುಂಬೈ: ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿ ಐ ಐ) ಮುಖ್ಯಸ್ಥನಾಗಿ ನಟ ಮತ್ತು ಬಿಜೆಪಿ ಧುರೀಣ ಗಜೇಂದ್ರ ಚೌಹಾನ್ ನೇಮಕಾತಿಯನ್ನು ವಿರೋಧಿಸಿ ಧರಣಿ ನಡೆಸುತ್ತಿರುವ ಸಂಸ್ಥೆಯ ವಿದ್ಯಾರ್ಥಿಗಳು ಮಂಗಳವಾರ ಮಾಹಿತಿ ಮತ್ತು ಪ್ರಸಾರ ಖಾತೆ ಅಧಿಕಾರಿಗಳನ್ನು ಭೇಟಿ ಮಾಡಿ ಮುಂದಿನ ನಡೆಯ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬೇಡಿಕೆಗಳ ಬಗ್ಗೆ ಚರ್ಚಿಸಲು ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ೧೮ ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಅಂತ್ಯ ಹಾಡಿದ್ದಾರೆ.

ಸರ್ಕಾರದ ಜೊತೆ ಮಾತುಕತೆಗಾಗಿ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದೇವೆ ಎಂದು ವಿದ್ಯಾರ್ಥಿಗಳ ಸಂಘ ತಿಳಿಸಿದ ಮೇಲೆ, ಭೇಟಿ ಮುಂಬೈನಲ್ಲಿ ನಿಯೋಜಿತವಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆಯ ಸಹ ಕಾರ್ಯದರ್ಶಿ ತಿಳಿಸಿದ್ದಾರೆ.

ಉಪವಾಸ ಸತ್ಯಾಗ್ರವನ್ನು ನಿಲ್ಲಿಸಿದ್ದರೂ, ತರಗತಿಗಳನ್ನು ಬಹಿಷ್ಕರಿಸಿ ಜೂನ್ ೧೨ ರಂದು ಪ್ರಾರಂಭವಾದ ಸಾಮಾನ್ಯ ಧರಣಿ, ವಿವಾದ ಬಗೆಹರಿಯುವವರೆಗೂ ಮುಂದುವರೆಯಲಿದೆ ಎಂದು ವಿದ್ಯಾರ್ಥಿ ಸಂಘಟನೆ ತಿಳಿಸಿದೆ.

ಭೇಟಿಯ ಸ್ಥಳ ಮುಂಬೈ ಅಥವಾ ಪುಣೆಯಾಗಿರಬೇಕು, ನವದೆಹಲಿ ಸಲ್ಲದು ಎಂಬ ವಿದ್ಯಾರ್ಥಿ ಸಮೂಹದ ಬೇಡಿಕೆಗೂ ಹೂಂಗುಟ್ಟಿರುವ ಸಚಿವಾಲಯ ಮುಂಬೈನ ಚಲನಚಿತ್ರ ವಿಭಾಗದಲ್ಲಿ ಸಭೆ ನಡೆಸಲು ಒಪ್ಪಿಕೊಂಡಿದೆ.

ಬಾಲಿವುಡ್ ನಿರ್ದೇಶಕರಾದ ರಾಜ್ ಕುಮಾರ್ ಹಿರಾನಿ ಮತ್ತು ವಿಧು ವಿನೋದ್ ಚೋಪ್ರಾ ಅವರ ಮಧ್ಯಸ್ಥಿಕೆಯಿಂದ ಈ ಭೇಟಿ ಸಾಧ್ಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com