ಪಂಜಾಬ್ ನಲ್ಲಿ ಎಲ್ ಇ ಟಿ, ಪಾಕಿಸ್ತಾನ ಐ ಎಸ್ ಐ ಫಿದಾಯಿನ್ ದಾಳಿ ನಡೆಸಲಿವೆ: ಗುಪ್ತಚರ

ಪಂಜಾಬ್ ಮತ್ತು ದೆಹಲಿಯಲ್ಲಿ ಫಿದಾಯಿನ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೆಂದ್ರ ಬೇಹುಗಾರಿಕಾ ಸಂಸ್ಥೆ ಎಚ್ಚರಿಕೆ ನೀಡಿದೆ. ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿಯ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಂಜಾಬ್ ಮತ್ತು ದೆಹಲಿಯಲ್ಲಿ ಫಿದಾಯಿನ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೆಂದ್ರ ಬೇಹುಗಾರಿಕಾ ಸಂಸ್ಥೆ ಎಚ್ಚರಿಕೆ ನೀಡಿದೆ. ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿಯ ಪ್ರಕಾರ ಗುರುದಾಸಪುರ ಶೈಲಿಯ ದಾಳಿಯನ್ನು ನಡೆಸಲು ಎಲ್ ಇ ಟಿ ಸಜ್ಜಾಗಿದೆ ಎಂದು ಎಚ್ಚರಿಸಲಾಗಿದೆ. ಮೂಲಗಳ ಪ್ರಕಾರ "ಇದು ನಿಯತವಾಗಿ ನೀಡುವ ಎಚ್ಚರಿಕೆಯಲ್ಲ. ಎಲ್ ಇ ಟಿ ಇಂದ ತರಬೇತಿ ಪಡೆದಿರುವ ೧೫-೧೦ ಉಗ್ರರು ಭಾರತಕ್ಕೆ ನುಸುಳಲು ಸಜ್ಜಾಗಿದ್ದಾರೆ" ಎಂದು ತಿಳಿಸಿವೆ.

"ಅವರುಗಳನ್ನು ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಲ್ಲಿ ಸಜ್ಜು ಮಾಡಲಾಗಿದೆ. ಈ ಉಗ್ರರು ನುಸುಳಿದ ಮೇಲೆ ಜಮ್ಮು ಕಾಶ್ಮೀರದಲ್ಲಿ ಭೂಗತಾವಾಗಿರುವ ಉಗ್ರ ಸಂಸ್ಥೆಗಳು ನೆರವಿನಿಂದ ಟ್ರಕ್ ಗಳಲ್ಲಿ ಬಚ್ಚಿಡಲಾಗಿರುವ ಶಸ್ತ್ರಾಸ್ತ್ರಗಳನ್ನು ನೀಡಲಾಗುತ್ತದೆ" ಎಂದು ಕೂಡ ಗುಪ್ತಚರ ಸಂಸ್ಥೆಗಳು ತಿಳಿಸಿವೆ.  

ಬೇಹುಗಾರಿಕಾ ಸಂಸ್ಥೆಯ ಅಧಿಕಾರಿಗಳ ಪ್ರಕಾರ ಪಾಕಿಸ್ತಾನ ಐ ಎಸ್ ಐ ಇತ್ತೀಚೆಗಷ್ಟೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಾದ ಎಲ್ ಇ ಟಿ, ಜೈಶ್ ಎ ಮೊಹಮ್ಮದ್, ಬಬ್ಬರ್ ಖಾಸ್ಲಾ ಮತ್ತು ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ಗಳ ಜೊತೆ ಸಭೆ ನಡೆಸಿತ್ತು ಎಂದು ತಿಳಿಸಿದ್ದಾರೆ.

ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ನ ಅಧ್ಯಕ್ಷ ರಂಜಿತ್ ಸಿಂಗ್ ಅಲಿಯಾಸ್ ನೀತಾ ಪಾಕಿಸ್ತಾನದ ಐ ಎಸ್ ಐ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದು ಪಂಜಾಬ್ ಮೇಲೆ ದಾಳಿ ನಡೆಸಲು ಯೋಜನೆ ಸಿದ್ಧಪಡಿಸಿದ್ದಾನೆ. ಗುಪ್ತಚರ ಮೂಲದ ಪ್ರಕಾರ, ಗುರುದ್ವಾರ ಕರ್ತಾಪುರ್ ಸಾಹಿಬ್ ಬಳಿ ಎಲ್ ಇ ಟಿ ಫಿಯಾದೀನ್ ಗಳಿಗೆ ನೀತಾ ಎರಡು ತಿಂಗಳ ಕಾಲ ಭಾರತೀಯ ಭಾಷೆಯ ಬಗೆಗೆ ತರಬೇತಿ ನೀಡಿದ್ದಾನೆ ಎಂದು ತಿಳಿಯಲಾಗಿದೆ.

"ನೀತಾ ಉಗ್ರರಿಗೆ ಸಿಖ್ ಸಂಪ್ರದಾಯ ಮತ್ತು ಗುರುಮುಖಿ ಲಿಪಿಯ ತರಬೇತಿ ನೀಡಿದ್ದಾನೆ. ನುಸುಳುವಾಗ ಉಗ್ರರು ಪ್ರಾದೇಶಿಕ ನಿವಾಸಿಗಳಂತೆ ಮುಖವಾಡ ಧರಿಸಿರುವ ಸಾಧ್ಯತೆ ಇದೆ. ಪ್ರಾದೇಶಿಕ ಪೊಲೀಸ್ ಇಲಾಖೆ ಮತ್ತು ಇತರ ಕಾನೂನು ಸಂಸ್ಥೆಗಳನ್ನು ಕಟ್ಟೆಚ್ಚರದಲ್ಲಿ ಇಡಲಾಗಿದೆ" ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com