ಇಂದಿನಿಂದ ಲಾರಿ ಮುಷ್ಕರ ಆರಂಭ

ದೇಶಾದ್ಯಂತ ಗುರುವಾರದಿಂದ ಲಾರಿ ಮಾಲೀಕರು ಮುಷ್ಕರ ನಡೆಸಲಿದ್ದಾರೆ. ಈ ಬಗ್ಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶಾದ್ಯಂತ ಗುರುವಾರದಿಂದ ಲಾರಿ ಮಾಲೀಕರು ಮುಷ್ಕರ ನಡೆಸಲಿದ್ದಾರೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಪ್ರತಿನಿಧಿಗಳ ನಡುವಿನ ಮಾತುಕತೆ ವಿಫಲ ಹೊಂದಿರುವ ಹಿನ್ನೆಲೆಯಲ್ಲಿ ಮುಷ್ಕರ ನಡೆಯುವುದು ಖಚಿತವಾಗಿದೆ.

ಟೋಲ್ ಪಾವತಿಯಲ್ಲಿ ಹಾಲಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು ಮತ್ತು ಏಕ ಕಂತಿನಲ್ಲಿ ತೆರಿಗೆ ಪಾವತಿ ಮಾಡುವ ಕೇಂದ್ರ ಸರ್ಕಾರದ ಹೊಸ ವ್ಯವಸ್ಥೆ ವಿರುದ್ಧ ಲಾರಿ ಮಾಲೀಕರು ಆಕ್ಷೇಪ ವ್ಯಕ್ತಪಸುತ್ತಿದ್ದಾರೆ. ಡಿಸೆಂಬರ್ ಅಂತ್ಯದ ಒಳಗಾಗಿ ದೇಶಾದ್ಯಂತ ಇಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆ ಜಾರಿ ಬರಲಿದೆ. ಆದರೆ ಹಾಲಿ ವ್ಯವಸ್ಥೆಯನ್ನು ಸಂಪೂರ್ಣ ತೆಗೆದು ಹಾಕುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ.

ಕೇಂದ್ರ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಇ-ಟೋಲಿಂಗ್ ವ್ಯವಸ್ಥೆ ಯಶಸ್ವಿಯಾಗದ ಯೋಜನೆ ಎನ್ನುವುದು ಲಾರಿ ಮಾಲೀಕರ ಒಕ್ಕೂಟದ ವಾದ. ಅಗತ್ಯ ವಸ್ತುಗಳ ಪೂರೈಕೆಯನ್ನು ಮುಷ್ಕರ ವ್ಯಾಪ್ತಿಯಿಂದ ಹೊರಗೆ ಇರಿಸಿರುವುದಾಗಿ ಹೇಳಿದೆ.

10 ಸಾವಿರ ಕೋಟಿ ನಷ್ಟ?:ಗುರುವಾರದಿಂದ ನಡೆಯುವ ಮುಷ್ಕರ ದಿಂದಾಗಿ ಪ್ರತಿದಿನ 10 ಸಾವಿರ ಕೋಟಿ,ಟ್ರಕ್ ಮಾಲೀಕರಿಗೆ ಪ್ರತಿ ದಿನ 1,500 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ಎಐಎಂಟಿಸಿಯ ಅಧ್ಯಕ್ಷ  ಭೀಮ್ ವಾದ್ವಾ ತಿಳಿಸಿದ್ದಾರೆ.

ನಿತಿನ್ ಗಡ್ಕರಿ ಅವರ ಜತೆಗಿನ ಮಾತುಕತೆ ಮುರಿದು ಬಿದ್ದಿದೆ.ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರದಿಂದ ಆರಂಭಿಸುತ್ತೇವೆ.ರಾಜ್ಯದಲ್ಲಿ 9 ಲಕ್ಷ ಲಾರಿಗಳು ರಸ್ತೆಗೆ ಇಳಿಯುವುದಿಲ್ಲ.
ಷಣ್ಮುಗಪ್ಪ ಲಾರಿ ಚಾಲಕರು ಮತ್ತು
ಮಾಲೀಕರ ಸಂಘದ ಅಧ್ಯಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com