ರಾಷ್ಟ್ರದಲ್ಲೇ ಪ್ರಥಮ ಸ್ಥಾನದಲ್ಲಿ ರಾಜ್ಯದ ಮೂರು ಶಿಕ್ಷಣ ಸಂಸ್ಥೆಗಳು
ಬೆಂಗಳೂರು: ಕರ್ನಾಟಕಕ್ಕೆ ಹೆಮ್ಮೆ ತರಬಲ್ಲ ಸಂಗತಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮೊದಲ ಬಾರಿಗೆ ಬಿಡುಗಡೆ ಮಾಡಿರುವ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ರಾಜ್ಯದ ಮೂರು ಸಂಸ್ಥೆಗಳು ಮೊದಲ ಸ್ಥಾನ ಪಡೆದಿವೆ.
ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಬೆಂಗಳೂರು, ಪ್ರಥಮ ಸ್ಥಾನದಲ್ಲಿ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ, ಭಾರತೀಯ ಪ್ರಬಂಧಕ ಸಂಸ್ಥೆ (ಐ ಐ ಎಂ) ಬೆಂಗಳೂರು ಅತ್ಯುತ್ತಮ ವ್ಯವಸ್ಥಾಪಕ ಶಿಕ್ಷಣ ಸಂಸ್ಥೆಯಾಗಿ ಪ್ರಥಮ ಸ್ಥಾನವನ್ನೂ ಹಾಗೂ ಔಷಧೀಯ ವಿಜ್ಞಾನಗಳ ಮಣಿಪಾಲ್ ಕಾಲೇಜು, ಫಾರ್ಮಾ ಶಿಕ್ಷಣ ಸಂಸ್ಥೆಗಳಲ್ಲಿ ಮೊದಲ ಸ್ಥಾನ ಗಳಿಸಿದೆ.
ಪಟಿಯಲ್ಲಿನ ೫೦ ಫಾರ್ಮಾ ಕಾಲೇಜುಗಳಲ್ಲಿ ರಾಜ್ಯದ ೧೨ ಫಾರ್ಮಾ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದೆ. ನೂರು ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ೧೦೦ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನೂ ಹಾಗೂ ೫೦ ಪ್ರಬಂಧಕ ಶಿಕ್ಷಣ ಸಂಸ್ಥೆಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್ ಐ ಆರ್ ಎಫ್) ಪಟ್ಟಿ ಮಾಡಿದೆ.
ಪ್ರಬಂಧಕ ಸಂಸ್ಥೆಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಐ ಐ ಎಂ ಅಹಮದಾಬಾದ್ ಅನ್ನು ಐ ಐ ಎಂ ಬೆಂಗಳೂರು ಹಿಂದಿಕ್ಕಿರುವುದು ವಿಶೇಷ. ವಿಶ್ವವಿದ್ಯಾಲಯ ಪಟ್ಟಿಯಲ್ಲಿ ಜೆ ಎನ್ ಯು ಮತ್ತು ಹೈದರಾಬಾದ್ ವಿಶ್ವವಿದ್ಯಾಲಯ ಮೂರನೆ ಮತ್ತು ನಾಲ್ಕನೇ ಸ್ಥಾನಗಳಲಿವೆ.
ಅಲ್ಲದೆ ಮಣಿಪಾಲ್ ಉನ್ನತ ಶಿಕ್ಷಣ ಸಂಸ್ಥೆ, ಜೆ ಎಸ್ ಎಸ್ ವಿಶ್ವವಿದ್ಯಾಲಯ, ಎಂ ಎಸ್ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಪ್ಲೈಡ್ ಸೈನ್ಸಸ್ ಮತ್ತು ಪಿಇ ಎಸ್ ವಿಶ್ವವಿದ್ಯಾಲಯ ಕ್ರಮವಾಗಿ ೩೨ನೇ, ೩೫ನೇ, ೯೦ನೇ ಮತ್ತು ೯೮ ನೇ ಸ್ಥಾನ ಗಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ