
ಪಣಜಿ: ಶಾಲೆಗಳಲ್ಲಿ ಭಾಷಾ ಮಾಧ್ಯಮದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದ ಗೋವಾ ಆರ್ ಎಸ್ ಎಸ್ ಘಟಕದ ಅಧ್ಯಕ್ಷ ಸುಭಾಶ್ ವೇಲಿಂಗರ್ ವಿರುದ್ಧ ಬಿಜೆಪಿ ಲೋಕಸಭಾ ಸದಸ್ಯ ನರೇಂದ್ರ ಸವೈಕರ್ ವಾಗ್ದಾಳಿ ನಡೆಸಿದ್ದಾರೆ.
"ಭದ್ರತಾ ಸಚಿವ ಮನೋಹರ್ ಪರ್ರಿಕರ್ ಹಾಗೂ ಬಿಜೆಪಿ ಪಕ್ಷದ ವಿರುದ್ಧ ವೇಲಿಂಗರ್ ನಡೆಸುವ ದಾಳಿ ಸರಿಯಾದುದ್ದಲ್ಲ. ನಾವೆಲ್ಲಾ ತರಬೇತಿಗೊಂಡಿರುವ ಸಂಘ ಪರಿವಾರದಲ್ಲಿ ನಮಗೆ ನಿಗ್ರಹವನ್ನು ಹೇಳಿಕೊಡುತ್ತಾರೆ. ಆದರೆ ವೇಲಿಂಗರ್ ಲಕ್ಷ್ಮಣ ರೇಖೆ ದಾಟಿದ್ದಾರೆ" ಎಂದು ಸವೈಕರ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಶೈಕ್ಷಣಿಕ ಮಾಧ್ಯಮವನ್ನಾಗಿ ಬಳಸಬೇಕೆಂದು ಪ್ರತಿಪಾದಿಸುವ ಭಾರತೀಯ ಭಾಷಾ ಸುರಕ್ಷಾ ಮಂಚ್ (ಬಿ ಬಿ ಎಸ್ ಎಂ) ನ ಅಧ್ಯಕ್ಷ ಕೂಡ ಆಗಿರುವ ವೇಲಿಂಗರ್, ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಮಾನ್ಯತೆ ನೀಡುವುದಾಗಿ ಚುನಾವಣಾ ಸಮಯದಲ್ಲಿ ನೀಡಿದ್ದ ವಚನವನ್ನು ಮರೆತಿರುವುದಕ್ಕೆ ಪರ್ರಿಕರ್ ಮತ್ತು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು.
ಇಂಗ್ಲಿಷನ್ನು ಶೈಕ್ಷಣಿಕ ಭಾಷಾ ಮಾಧ್ಯಮವನ್ನಾಗಿ ಬಳಸುತ್ತಿರುವುದಕ್ಕೆ, ಹಾಗೂ ಸರ್ಕಾರ ಈ ಶಾಲೆಗಳಿಗೆ ಅನುದಾನ ನೀಡುತ್ತಿರುವ ನಡೆಯನ್ನು ಬಿ ಬಿ ಎಸ್ ಎಂ ವಿರೋಧಿಸಿತ್ತು.
"ಗೋವಾದ ಆರ್ ಎಸ್ ಎಸ್ ಅಧ್ಯಕ್ಷ ಸ್ಥಾನಕ್ಕೆ ವೇಲಿಂಗರ್ ರಾಜೀನಾಮೆ ನೀಡಬೇಕು ಹಾಗೂ ಇಂತಹ ಹೇಳಿಗೆ ನಿಡುವ ಮೊದಲು ಚುನಾವಣೆ ಗೆಲ್ಲಬೇಕು. ಇಲ್ಲಿಗೆ ಸಾಕು, ಪಕ್ಷದಿಂದಲೇ ಸಹಾಯ ಪಡೆದು ಹುಚ್ಚು ಹುಚ್ಚಾಗಿ ಮಾತನಾಡುವುದನ್ನು ನಿಲ್ಲಿಸಿ" ಎಂದು ಸವೈಕರ್ ಹೇಳಿದ್ದಾರೆ.
Advertisement