'ಎದ್ದೇಳು ಭಾರತ' ಯೋಜನೆ ಕಣ್ಣೊರೆಸುವ ತಂತ್ರ : ಮಾಯಾವತಿ

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜ ಪಕ್ಷದ (ಬಿ ಎಸ್ ಪಿ) ಅಧ್ಯಕ್ಷೆ ಮಾಯಾವತಿ 'ಎದ್ದೇಳು ಭಾರತ' (ಸ್ಟ್ಯಾಂಡ್ ಅಪ್ ಇಂಡಿಯಾ)
ಬಹುಜನ ಸಮಾಜ ಪಕ್ಷದ (ಬಿ ಎಸ್ ಪಿ) ಅಧ್ಯಕ್ಷೆ ಮಾಯಾವತಿ
ಬಹುಜನ ಸಮಾಜ ಪಕ್ಷದ (ಬಿ ಎಸ್ ಪಿ) ಅಧ್ಯಕ್ಷೆ ಮಾಯಾವತಿ

ಲಕನೌ: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜ ಪಕ್ಷದ (ಬಿ ಎಸ್ ಪಿ) ಅಧ್ಯಕ್ಷೆ ಮಾಯಾವತಿ 'ಎದ್ದೇಳು ಭಾರತ' (ಸ್ಟ್ಯಾಂಡ್ ಅಪ್ ಇಂಡಿಯಾ) ಯೋಜನೆ ಕಣ್ಣೊರೆಸುವ ತಂತ್ರವಾಗಿದ್ದು, ಉತ್ತರ ಪ್ರದೇಶ ಚುನಾವಣೆಗಳಲ್ಲಿ ದಲಿತ ಮತಗಳಿಗಾಗಿ ಮಾಡಿರುವ ತಂತ್ರವಲ್ಲದೆ ಇದರಿಂದ ಬೇರೆ ಯಾವುದೇ ಗಂಭೀರ ಉಪಯೋಗವಿಲ್ಲ ಎಂದಿದ್ದಾರೆ.

ದಲಿತರನ್ನು ಸಾಮಾಜಿಕವಾಗಿ ಸಬಲೀಕರಣಗೊಳಿಸುವುದಕ್ಕೂ ಮುಂಚೆ ಪ್ರಧಾನಿ ನರೇಂದ್ರ ಮೋದಿ, ಸರ್ಕಾರಿ ಉದ್ಯೋಗಳಲ್ಲಿ ಈ ಸಮುದಾಯಗಳಿಗೆ ಮೀಸಲಾಗಿರುವುದನ್ನು ಹುದ್ದೆಗಳನ್ನು ತುಂಬಲು ಪ್ರಯತ್ನಿಸಬೇಕು ಎಂದು ಮಾಯಾವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಇವೆಲ್ಲವೂ ರಾಜಕೀಯ ಪ್ರಚಾರಕ್ಕಾಗಿ ಬಳಕೆಯಾಗುತ್ತಿದೆಯೇ ಹೊರತು, ದಲಿತರು ಮತ್ತು ಹಿಂದುಳಿದವರ ಸ್ಥಿತಿಯನ್ನು ಉತ್ತಮಪಡಿಸಲು ಅಲ್ಲ" ಎಂದು ಕೂಡ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಪಕ್ಷದ ವಕ್ತಾರ ವಿಜಯ್ ಬಹದ್ದೂರ್ ಪಾಠಕ್, ದಲಿತ ನಾಯಕಿ ತಮ್ಮ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿದ್ದಾರೆ

ಬರೀ ಭರವಸೆಗಳಾಗದೆ, ಪ್ರಧಾನಮಂತ್ರಿಯವರ ಯೋಜನೆಗಳು ದಲಿತರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿ ಅವರ ಜೀವನೋಪಾಯವನ್ನು ಗಳಿಸುವ ಸಾಧ್ಯತೆ ಇರುವುದರಿಂದ ಮಾಯಾವತಿ ಅವರು ನಲುಗಿದ್ದಾರೆ ಎಂದು ಅವರು ಹೇಳಿದ್ದಾರೆ.

"ಎಲ್ಲರು ಜೊತೆಗೆ, ಎಲ್ಲರ ವಿಕಾಸಕ್ಕೆ ಅದ್ಭುತ ಉದಾಹರಣೆ 'ಎದ್ದೇಳು ಬಾರತ' ಯೋಜನೆ
 ಎಂದು ಪಾಠಕ್ ಹೇಳಿದ್ದರೆ.

"ದಲಿತರ ಉದ್ಧಾರಕ್ಕಿಂತಲೂ ದಲಿತರನ್ನು ತಾವು ಅಧಿಕಾರಕ್ಕೆ ಬರಲು ಬಳಸಿಕೊಳ್ಳುವ ನಾಯಕರಿಗೆ ಮತ್ತು ಪಕ್ಷಗಳಿಗೆ ಇದು ಭಯ ತಂದಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು" ಎಂದು ಕೂಡ ಪಾಠಕ್ ಹೇಳಿದ್ದಾರೆ.

ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದ ಜನರು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಸಹಾಯ ಮಾಡುವ ಯೋಜನೆಗೆ ಮಂಗಳವಾರ ಪ್ರಧಾನಿ ಮೋದಿ ಚಾಲನೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com