ಇದೇ ಮೊದಲ ಬಾರಿ, ಧಾರವಾಡ ಖಜಾನೆಯಲ್ಲಿ ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಗಳನ್ನು ಧಾರವಾಡ ಜಿಲ್ಲಾ ಖಜಾನೆಯಲ್ಲಿಟ್ಟು, ಇಲ್ಲಿಂದಲೇ...
ಪ್ರಶ್ನೆ ಪತ್ರಿಕೆಗಳನ್ನು ಲಾರಿಯಿಂದ ಕೆಳಗಿಳಿಸುತ್ತಿರುವುದು
ಪ್ರಶ್ನೆ ಪತ್ರಿಕೆಗಳನ್ನು ಲಾರಿಯಿಂದ ಕೆಳಗಿಳಿಸುತ್ತಿರುವುದು
ಧಾರವಾಡ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಗಳನ್ನು ಧಾರವಾಡ ಜಿಲ್ಲಾ ಖಜಾನೆಯಲ್ಲಿಟ್ಟು, ಇಲ್ಲಿಂದಲೇ ಪರೀಕ್ಷಾ ಕೇಂದ್ರಗಳಿಗೆ ರವಾನೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ 12ರಂದು ಮರುಪರೀಕ್ಷೆ ನಿಗದಿಯಾಗಿದ್ದು, ಈ ಬಾರಿ ಯಾವುದೇ ಕಾರಣಕ್ಕೂ ಪ್ರಶ್ನಿ ಪತ್ರಿಕೆ ಸೋರಿಕೆಯಾಗಬಾರದು ಎಂಬ ಕಾರಣಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆಗಳನ್ನು ಧಾರವಾಡ ಖಜಾನೆಯಲ್ಲಿ ಭದ್ರವಾಗಿಟ್ಟತ್ತು.
ಪ್ರತಿ ಬಾರಿ ಪ್ರಶ್ನೆಪತ್ರಿಕೆಗಳನ್ನು ಬೆಂಗಳೂರಿನಲ್ಲಿಟ್ಟು ಅಲ್ಲಿಂದ ಎಲ್ಲ ಜಿಲ್ಲೆಗಳಿಗೆ ರವಾನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಧಾರವಾಡ ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆಪತ್ರಿಕೆಗಳ ಬಾಕ್ಸ್​ಗಳನ್ನು ಇಡಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಿಐಎಸ್​ಎಫ್ ಭದ್ರತೆ: ಮಹಾರಾಷ್ಟ್ರದಿಂದ ಬಂದ ಪ್ರಶ್ನೆಪತ್ರಿಕೆಗಳಿದ್ದ 2 ಟ್ರಕ್​ಗಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್)ಯ ಭದ್ರತೆ ಕಲ್ಪಿಸಲಾಗಿತ್ತು. ಪ್ರಶ್ನೆಪತ್ರಿಕೆಗಳ ಬಾಕ್ಸ್​ಗಳನ್ನು ಖಜಾನೆ ಕಟ್ಟಡದೊಳಗೆ ಸಾಗಿಸುವವರೆಗೂ ಶಸ್ತ್ರಸಜ್ಜಿತ ಪಡೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.
ಇಂದು ಜಿಲ್ಲೆಗಳಿಗೆ ರವಾನೆ
ಜಿಲ್ಲಾ ಖಜಾನೆಯಲ್ಲಿಡಲಾಗಿದ್ದ ಪ್ರಶ್ನೆಪತ್ರಿಕೆಗಳ ಬಾಕ್ಸ್ ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಇಂದು ಬೆಳಗ್ಗೆ ರವಾನೆ ಮಾಡಲಾಗಿದ್ದು, ಇದಕ್ಕಾಗಿ ಭಾನುವಾರ ಸಂಜೆಯೇ ವಿಆರ್​ಎಲ್ ಲಾಜಿಸ್ಟಿಕ್ಸ್, ಮಾರುತಿ ಪಾರ್ಸಲ್ ಕ್ಯಾರಿಯರ್ಸ್ (ಎಂಪಿಸಿ), ಅಕ್ಷಯ ಪಾತ್ರ, ಡಿಟಿಡಿಸಿ ಸಂಸ್ಥೆಗಳ ಸುಭದ್ರ ಕವಚವಿರುವ ವಾಹನಗಳನ್ನು ತರಿಸಲಾಗಿತ್ತು. ಆಯಾ ಜಿಲ್ಲೆ ಉಪ ವಿಭಾಗಾಧಿಕಾರಿ, ತಹಸೀಲ್ದಾರ್  ಉಸ್ತುವಾರಿಯಲ್ಲಿ ವಾಹನಗಳು ತೆರಳಲಿವೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com