ಕೇಂದ್ರ ಸಚಿವರ ವಿರುದ್ಧ ಜಾಮೀನುರಹಿತ ವಾರಂಟ್ ರದ್ದುಮಾಡಿದ ಹೈದರಾಬಾದ್ ಹೈಕೋರ್ಟ್

ಸಾಲ ಸುಸ್ಥಿದಾರ ಪ್ರಕರಣದಲ್ಲಿ ಕೇಂದ್ರ ಸಚಿವ ವೈ ಎಸ್ ಚೌಧರಿ ವಿರುದ್ಧ ನಗರ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ವಾರಂಟ್ ಅನ್ನು ಮಂಗಳವಾರ ಹೈಕೋರ್ಟ್ ವಜಾ
ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ ಎಸ್ ಚೌಧರಿ
ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ ಎಸ್ ಚೌಧರಿ

ಹೈದರಾಬಾದ್: ಸಾಲ ಸುಸ್ಥಿದಾರ ಪ್ರಕರಣದಲ್ಲಿ ಕೇಂದ್ರ ಸಚಿವ ವೈ ಎಸ್ ಚೌಧರಿ ವಿರುದ್ಧ ನಗರ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ವಾರಂಟ್ ಅನ್ನು ಮಂಗಳವಾರ ಹೈಕೋರ್ಟ್ ವಜಾ ಮಾಡಿದೆ.

ಆದರೆ ಮೇ ೫ ರಂದು ಈ ಪ್ರಕರಣದ ವಿಚಾರಣೆಯಲ್ಲಿ ವೈಯಕ್ತಿಕವಾಗಿ ಹಾಜರಾಗುವಂತೆ ಸಚಿವರಿಗೆ ನ್ಯಾಯಾಲಯ ಸೂಚಿಸಿದೆ. ಸಾಲ ಮರುಪಾವತಿಸುವಲ್ಲಿ ವಿಫಲರಾಗಿದ್ದಕ್ಕೆ ಇವರ ವಿರುದ್ಧ ಮಾರಿಷಸ್ ಮೂಲಕ ಬ್ಯಾಂಕ್ ದ್ಯಾವೆ ಹೂಡಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ ಎಸ್ ಚೌಧರಿ ತಮ್ಮ ಅರ್ಜಿಯಲ್ಲಿ, ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ವಜಾ ಮಾಡುವಂತೆ ಕೇಳಿಕೊಂಡಿದ್ದರು.

ಮಧ್ಯಂತರ ಆದೇಶ ನೀಡಿದ ಹೈಕೋರ್ಟ್, ವಾರಂಟ್ ರದ್ದುಗೊಳಿಸಿ ಜೂನ್ ೧೬ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

ಕೋರ್ಟ್ ಸಮನ್ಸ್ ಉಲ್ಲಂಘಿಸಿ ಮೂರನೆ ಬಾರಿಗೆ ವೈಯಕ್ತಿಕವಾಗಿ ಹಾಜರಾಗಲು ವಿಫಲರಾಗಿದ್ದಕ್ಕೆ ೧೨ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮೆಜೆಸ್ಟ್ರೇಟ್ ಏಪ್ರಿಲ್ ೭ರಂದು ಸಚಿವ ಬಂಧನಕ್ಕಾಗಿ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಕೋರ್ಟ್ ವಿಚಾರಣೆಯನ್ನು ಬೇಕಂತಲೇ ಸಚಿವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ದೂರಿ ಮಾರಿಷಸ್ ಕಮರ್ಷಿಯಲ್ ಬ್ಯಾಂಕ್ ಪರ ವಕೀಲ ವಾದ ಮಾಡಿದ್ದರು. ವೈ ಎಸ್ ಚೌಧರಿ ಮತ್ತಿತರರು ೧೦೬ಕೋಟಿಗಿಂತಲೂ ಹೆಚ್ಚಿನ ಸಾಲ ಮರುಪಾವತಿಸದೆ ಸುಸ್ಥಿದಾರರಾಗಿದ್ದಾರೆ ಎಂದು ದೂರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com