
ಇಂದೋರ್: ಡಾ| ಭೀಮರಾವ್ ಅಂಬೇಡ್ಕರ್ ಅವರ ೧೨೫ನೇ ಜಯಂತಿಯ ದಿನದಂದು ಗೌರವ ಸಲ್ಲಿಸಲು ಮಾಹೌಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, 'ಗ್ರಾಮ ಉದಯದಿಂದ ಭಾರತದ ಉದಯ' ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಸುಮಾರು ೧೨:೫೫ ಕ್ಕೆ ಇಂದೋರ್ ನಗರದಲ್ಲಿ ಮೋದಿ ಇಳಿಯಲಿದ್ದು ಅಲ್ಲಿಂದ ಮಾಹೌಗೆ ತೆರಳಲಿದ್ದಾರೆ. ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಅವರು ಗೌರವ ಸಲ್ಲಿಸಲಿದ್ದು ನಂತರ ಕಾರ್ಯಕ್ರಮವೊಂದರಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮಾಹೌ ನಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜನಿಸಿದ್ದರು.
ಅಂಬೇಡ್ಕರ್ ಜಯಂತಿ ೧೪ ನೇ ಏಪ್ರಿಲ್ ನಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ೨೪ ನೇ ಏಪ್ರಿಲ್ ವರೆಗೆ ಸರ್ಕಾರದ ಅಭಿಯಾನ 'ಗ್ರಾಮ ಉದಯದಿಂದ ಭಾರತದ ಉದಯ' ಜಾರಿಯಲ್ಲಿರಲಿದೆ ಎಂದು ತಿಳಿದುಬಂದಿದೆ.
ಈ ಅಭಿಯಾನ ಪಂಚಾಯತ್ ರಾಜ್ ಅನ್ನು ಬಲಿಷ್ಠಗೊಳಿಸಾಲು ಹಾಗೂ ಗ್ರಾಮಗಳಲ್ಲಿ ಸಾಮಾಜಿಕ ಸೌಹಾರ್ದ ಮತ್ತು ಅಭಿವೃದ್ಧಿಗೆ ಸಹಕರಿಸಲಿದೆ ಎನ್ನಲಾಗಿದೆ.
Advertisement