ಅಮೆರಿಕದ ಪ್ರಮುಖ ಆಡಳಿತಾತ್ಮಕ ಹುದ್ದೆಗೆ ಮಾಸ್ಟರ್ ಕಾರ್ಡ್ ಸಿಇಒ ಅಜಯ್ ಬಂಗಾ ನೇಮಕ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ವ್ಯಕ್ತಿಗಳಿಗೆ ತಮ್ಮ ಆಡಳಿತದಲ್ಲಿ ಮಹತ್ವದ ಹುದ್ದೆಗಳನ್ನು ನೀಡುತ್ತ ಬಂದಿದ್ದು,...
ಅಜಯ್ ಬಂಗಾ
ಅಜಯ್ ಬಂಗಾ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ವ್ಯಕ್ತಿಗಳಿಗೆ ತಮ್ಮ ಆಡಳಿತದಲ್ಲಿ ಮಹತ್ವದ ಹುದ್ದೆಗಳನ್ನು ನೀಡುತ್ತ ಬಂದಿದ್ದು, ಇದೀಗ ಮತ್ತೊಬ್ಬ ಭಾರತೀಯನನ್ನು ಪ್ರಮುಖ ಹುದ್ದೆಗೆ ನೇಮಕ ಮಾಡಿದ್ದಾರೆ. 
ಮಾಸ್ಟರ್ ಕಾರ್ಡ್ ಸಂಸ್ಥೆಯ ಸಿಇಒ ಹಾಗೂ ಅಧ್ಯಕ್ಷರಾಗಿರುವ ಅಜಯ್ ಬಂಗಾ ಅವರನ್ನು ಅಮೆರಿಕದ ರಾಷ್ಟ್ರೀಯ ಸೈಬರ ಭದ್ರತೆ ಹೆಚ್ಚಳ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಈ ಆಯೋಗ ಒಂಬತ್ತು ಸದಸ್ಯರನ್ನು ಒಳಗೊಂಡಿದ್ದು, ಅದರಲ್ಲಿ ಬಂಗಾ ಸಹ ಒಬ್ಬರಾಗಿದ್ದಾರೆ.
ಐಐಎಂ ಅಹಮದಾಬಾದ್​ನಲ್ಲಿ ಎಂಬಿಎ ಪದವಿ ಪಡೆದಿರುವ ಬಂಗಾ ವಿವಿಧ ಕಂಪನಿಗಳಲ್ಲಿ ಮಹತ್ವದ ಹುದ್ದೆ ನಿರ್ವಹಿಸಿದ್ದಾರೆ.
1981ರಿಂದ 1994ರ ವರೆಗೆ ನೆಸ್ಲೆ ಇಂಡಿಯಾ ಕಂಪನಿಯ ಮಾರಾಟ ಹಾಗೂ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡಿದ್ದ ಅವರು, ಬಳಿಕ ಪೆಪ್ಸಿ ಕೊ ರೆಸ್ಟೊರಂಟ್ ಇಂಟರ್​ನ್ಯಾಷನಲ್ ಇಂಡಿಯಾದ ವ್ಯಾಪಾರ ವಿಭಾಗದ ನಿರ್ದೇಶಕರಾಗಿ ಆಯ್ಕೆಯಾದರು. 1996ರಲ್ಲಿ ಸಿಟಿಗ್ರೂಪ್​ಗೆ ಸೇರಿದ ಬಂಗಾ, ಏಷ್ಯಾ ಪೆಸಿಫಿಕ್ ಸಿಇಒ ಆಗಿ ಬಡ್ತಿ ಪಡೆದರು. 2009ರಲ್ಲಿ ಮಾಸ್ಟರ್​ಕಾರ್ಡ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದರು. ಅಜಯ್ ಬಂಗಾ ಅವರ ಆಡಳಿತ ಚತುರತೆ ಹಾಗೂ ಪರಿಣತಿಯಿಂದಾಗಿ ಅಮೆರಿಕ ಸರ್ಕಾರ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲಿದೆ ಎಂದು ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com