ಭಾರತೀಯ ವಿದೇಶಿ ವಿನಿಮಯ ಮೀಸಲು ೩೫೯.೯೧ ಬಿಲಿಯನ್ ಡಾಲರ್ ಗೆ ಹೆಚ್ಚಳ

ಭಾರತೀಯ ವಿದೇಶಿ ವಿನಿಮಯ ಮೀಸಲು ಅಲ್ಪ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು ಏಪ್ರಿಲ್ ೮ಕ್ಕೆ ಇದು ೩೫೯.೯೧ ಬಿಲಿಯನ್ ಡಾಲರ್ ಆಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ)
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಭಾರತೀಯ ವಿದೇಶಿ ವಿನಿಮಯ ಮೀಸಲು ಅಲ್ಪ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು ಏಪ್ರಿಲ್ ೮ಕ್ಕೆ ಇದು ೩೫೯.೯೧ ಬಿಲಿಯನ್ ಡಾಲರ್ ಆಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ತಿಳಿಸಿದೆ.

ಆರ್ ಬಿ ಐ ವಿದೇಶಿ ವಿನಿಮಯ ಮಾಹಿತಿ ಪ್ರಕಾರ ಕಳೆದ ವಾಣಿಜ್ಯ ವರ್ಷಾಂತ್ಯದ (ಏಪ್ರಿಲ್ ೧ ೨೦೧೬) ಅಂತ್ಯಕ್ಕೆ ಇದು ೩೫೯.೭೫ ಇದ್ದು, ಏಪ್ರಿಲ್ ೮ಕ್ಕೆ ಹೆಚ್ಚಳಗೊಂಡಿದೆ.

ಏಪ್ರಿಲ್ ೮ ಕ್ಕೆ ಹಣದ ಮೀಸಲು ೩೩೫.೮೪ ಬಿಲಿಯನ್ ಡಾಲರ್ ಇದ್ದು, ಚಿನ್ನದ ಮೀಸಲು ೨೦.೧೧ ಬಿಲಿಯನ್ ಡಾಲರ್ ನಷ್ಟಿದೆ. ಈಗ ವಿಶೇಶ ಹಣ ಹಿಂಪಡೆಯುವ ಶಕ್ತಿ ೧.೫ ಬಿಲಿಯನ್ ಡಾಲರ್ ಇದ್ದು, ಅಂತರಾಷ್ಟ್ರೀಯ ವಿತ್ತೀಯ ನಿಧಿಯಲ್ಲಿ ೨.೪೫ ಬಿಲಿಯನ್ ಡಾಲರ್ ಮೀಸಲಿದೆ ಎಂದು ತಿಳಿಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com