ರಾಜೀವ್ ಹಂತಕರ ಬಿಡುಗಡೆಗೆ ಕೇಂದ್ರ ನಕಾರ; ಪಿಎಂಕೆ, ಸಿಪಿಐ ಟೀಕಾ ಪ್ರಹಾರ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಯ್ಯೆಯಲ್ಲಿ ತಪ್ಪಿತಸ್ಥರಾಗಿ ಜೈಲು ಸಜೆ ಅನುಭವಿಸುತ್ತಿರುವ ಏಳು ಜನರನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನಲೆಯಲ್ಲಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಯ್ಯೆಯಲ್ಲಿ ತಪ್ಪಿತಸ್ಥರಾಗಿ ಜೈಲು ಸಜೆ ಅನುಭವಿಸುತ್ತಿರುವ ಏಳು ಜನರನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನಲೆಯಲ್ಲಿ ಪಿ ಎಂ ಕೆ ಮತ್ತಿ ಸಿ ಪಿ ಐ ವಾಗ್ದಾಳಿ ನಡೆಸಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿಲುವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪಿ ಎಂ ಕೆ ಸಂಸ್ಥಾಪಕ ಎಸ್ ರಾಮದಾಸ್ ಹೇಳಿದ್ದರೆ. ಈಗ ಸದ್ಯಕ್ಕೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತಪ್ಪಿತಸ್ಥರನ್ನು ಬಿಡುಗಡೆ ಮಾಡದಂತೆ ಕೇಂದ್ರ ತಮಿಳು ನಾಡು ಸರ್ಕಾರಕ್ಕೆ ಸೂಚಿಸಿದೆ ಎಂದು ಅವರು ನವದೆಹಲಿಯಲ್ಲಿ ಹೇಳಿದ್ದಾರೆ.

ತಪ್ಪಿತಸ್ಥರ ಬಿಡುಗಡೆಯ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಸೂಚಿಸುವಂತೆ ತಮಿಳುನಾಡು ಸರ್ಕಾರ ಮಾರ್ಚ್ ನಲ್ಲಿ ಪತ್ರ ಬರೆದಿತ್ತು. ಕೇಂದ್ರ ಸರ್ಕಾರದ ನಿಲುವು 'ತಮಿಳು-ವಿರೋಧಿ' ಎಂದು ರಾಮದಾಸ್ ಆರೋಪಿಸಿದ್ದಾರೆ.

ವಿಧಾನಸಭಾ ಚುನಾವಣೆ ಹತ್ತಿರವಿದ್ದರಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ, ಎ ಐ ಡಿ ಎಂ ಕೆ ಸರ್ಕಾರ ರಾಜಕೀಯ ಅವಕಾಶವಾದಿಯಾಗಿ ವರ್ತಿಸಿದೆ ಎಂದು ಸಿಪಿಐ ಮುಖಂಡ ಆರ್ ಮುಥರಸನ್ ಹೇಳಿದ್ದಾರೆ.

ಸಿಬಿಐ ತನಿಖೆ ಮಾಡಿರುವ ಈ ಪ್ರಕರಣಗಳಲ್ಲಿ ತಮಿಳು ನಾಡು ಸರ್ಕಾರ ಕೇಂದ್ರದ ಜೊತೆಗೆ ಮಾತುಕತೆ ನಡೆಸಿ ತಪ್ಪಿತಸ್ಥರನ್ನು ಬಿಡುಗಡೆ ಮಾಡಬಹುದು ಎಂದು ಸುಪ್ರೀಮ್ ಕೋರ್ಟ್ ಡಿಸೆಂಬರ್ ೨ ೨೦೧೫ರಲ್ಲಿ ಹೇಳಿತ್ತು.

ರಾಜೀವ್ ಗಾಂಧಿಯ ಹತ್ಯೆಯಲ್ಲಿ ತಪ್ಪಿತಸ್ಥರಾದ ಏಳು ಜನ ವಿ.ಶ್ರೀಹರನ್, ಎಜಿ. ಪೆರಾರಿವಾಲನ್, ಟಿ. ಸುತೇಂದ್ರರಾಜ, ಜಯಕುಮಾರ್, ರಾಬರ್ಟ್ ಪಯಾಸ್, ರವಿಚಂದ್ರನ್ ಮತ್ತು ನಳಿನಿ ೧೯೯೧ರಿಂದಲೂ ಜೈಲು ಸಜೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com