
ರಾಂಚಿ: ಬೇಸಿಗೆಯ ತಾಪ ವಿಪರೀತವಾಗುತ್ತಿರುವುದರಿಂದ ರಾಂಚಿಯಲ್ಲಿ ಶಾಲೆಗಳನ್ನು ಬೆಳಗ್ಗೆ ೧೧:೩೦ ರೊಳಗೆ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಹೊಸ ಸಮಯದ ನಿಯಮ ಬುಧವಾರದಿಂದ ಜಾರಿಯಲ್ಲಿರಲಿದೆ ಎಂದು ಕೂಡ ಧಿಕಾರಿ ತಿಳಿಸಿದ್ದಾರೆ.
೮ನೆ ತರಗತಿಯವರೆಗೆ ಶಾಲೆಗಳನ್ನು ಬೆಳಗ್ಗೆ ೧೦:೩೦ ರೊಳಗೆ ಮುಗಿಸಬೇಕು ಮತ್ತು ೯ನೇ ತರಗತಿಂದ ೧೨ನೇ ತರಗತಿಯವರೆಗೆ ಬೆಳಗ್ಗೆ ೧೧:೩೦ಕ್ಕೆ ತರಗತಿಗಳನ್ನು ಮುಗಿಸಬೇಕು ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡ ರಾಜ್ಯದ ಸ್ಥಾಪನೆಗೂ ಮುಂಚಿತವಾಗಿ ಬಿಹಾರದ ಬೇಸಿಗೆ ರಾಜಧಾನಿಯಾಗಿದ್ದ ರಾಂಚಿ ಈ ವರ್ಷ ಏಪ್ರಿಲ್ ೧ ರಿಂದ ೪೦ ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನದಿಂದ ಬಳಲುತ್ತಿದೆ.
ಸೋಮವಾರ ಸೂರ್ಯನ ಶಾಖದಿಂದ ಬಳಲಿ ವಿದ್ಯಾರ್ಥಿನಿಯೊಬ್ಬಳು ಅಸು ನೀಗಿರುವ ವರದಿಯಾಗಿದೆ.
ಅತೀವ ತಾಪಮಾನದಿಂದ ಜಾರ್ಖಂಡದಲ್ಲಿ ಇಲ್ಲಿಯವರೆಗೂ ೧೫ ಜನ ಮೃತಪಟ್ಟಿದ್ದು, ಜೆಮ್ ಶೆಡ್ ಪುರ ಮತ್ತು ದಲ್ತಂಗಂಜ್ ನಲ್ಲಿ ಉಷ್ಣಾಂಶ ೪೫ ಡಿಗ್ರಿಗೂ ಹೆಚ್ಚಿದೆ.
ರಾಂಚಿ, ಜೆಮ್ ಶೆಡ್ ಪುರ ಮತ್ತು ದಲ್ತಂಗಂಜ್ ಹಾಗೂ ರಾಜ್ಯದ ಮತ್ತಿತರ ಭಾಗಗಳಲ್ಲಿ ನೀರಿನ ಸಮಸ್ಯೆಯೂ ತೀವ್ರವಾಗಿದೆ.
Advertisement