ಅಂಕೆಯಿಲ್ಲದೆ ಬೆಳೆದಿರುವ ಜಮ್ಮು ಕಾಶ್ಮೀರದ ದಿನಪತ್ರಿಕೆಗಳ ಸಂಖ್ಯೆ ೨೬೫!

ಇಂಗ್ಲಿಶ್ ಮತ್ತು ಪ್ರಾದೇಶಿಕ ಭಾಷೆಗಳ ಒಟ್ಟು ೨೬೫ ದಿನಪತ್ರಿಕೆಗಳು ೧.೪ ದಶಲಕ್ಷ ಜನಸಂಖ್ಯೆಯ ಜಮ್ಮು ಕಾಶ್ಮೀರದಿಂದ ಪ್ರಕಟವಾಗುತ್ತವೆ ಎಂದರೆ ಬೆರಗಾಗದೆ ಇರದು. ಆದರೆ ಇವುಗಳಲ್ಲಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಇಂಗ್ಲಿಶ್ ಮತ್ತು ಪ್ರಾದೇಶಿಕ ಭಾಷೆಗಳ ಒಟ್ಟು ೨೬೫ ದಿನಪತ್ರಿಕೆಗಳು ೧.೪ ದಶಲಕ್ಷ ಜನಸಂಖ್ಯೆಯ ಜಮ್ಮು ಕಾಶ್ಮೀರದಿಂದ ಪ್ರಕಟವಾಗುತ್ತವೆ ಎಂದರೆ ಬೆರಗಾಗದೆ ಇರದು. ಆದರೆ ಇವುಗಳಲ್ಲಿ ಬಹುತೇಕ ಶ್ರೀನಗರದಲ್ಲಾಗಲೀ ಅಥವಾ ಇನ್ನಿತರ ಸ್ಥಳಗಳಲ್ಲಾಗಲೀ ಪತ್ರಿಕೆ ಮಾರಾಟ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ.

ಒಂದು ಡಜನ್ ಇಂಗ್ಲಿಶ್ ಮತ್ತು ಪ್ರಾದೇಶಿಕ ಭಾಷೆಯ ಪತ್ರಿಕೆಗಳಿಗೆ ಓದುಗರಿಲ್ಲದ ಈ ರಾಜ್ಯದಿಂದ ಹಾಗಾದರೆ ಅಷ್ಟೊಂದು ಪತ್ರಿಕೆಗಳು ಪ್ರಕಟವಾಗುವುದೇಕೆ?

"ಅಷ್ಟೇನೂ ಓದುಗರನ್ನು ಹೊಂದದ ಈ ದಿನಪತ್ರಿಕೆಗಳು ಕೇವಲ ಸರ್ಕಾರಿ ಜಾಹೀರಾತುಗಳಿಗಾಗಿ ಪ್ರಕಟವಾಗುತ್ತವೆ" ಎನ್ನುತ್ತಾರೆ ಹೆಸರು ಬಹಿರಂಗಪಡಿಸದ ಮಾಹಿತಿ ಸಚಿವಾಲಯದ ಅಧಿಕಾರಿಯೊಬ್ಬರು.

"ಪತ್ರಿಕೆಗಳು ಉಳಿಯಲು ಕೊನೆಗೆ ಸರ್ಕಾರಿ ಜಾಹಿರಾತು ಮಾತ್ರ ಆದಾಯ ಒದಗಿಸುತ್ತದೆ" ಎನ್ನುತ್ತಾರೆ ಅಧಿಕಾರಿ.

ಓದುಗರಿಲ್ಲದ ದಿನಪತ್ರಿಕೆಗಳಿಗೆ ಜಾಹೀರಾತು ನೀಡಿ ಸರ್ಕಾರಕ್ಕೆ ಪ್ರಯೋಜನವೇನು ಎಂಬ ಪ್ರಶ್ನೆಗೆ "ನೀವು ಆ ಪ್ರಶ್ನೆಯನ್ನು ದಿನಪತ್ರಿಕೆಗಳನ್ನು ಪ್ರಕಟಿಸುವ ಪ್ರಕಾಶಕರಿಗೆ ಕೇಳಬೇಕು" ಎಂದು ಕೈಚೆಲ್ಲುತ್ತಾರೆ.

ಜಮ್ಮು ಕಾಶ್ಮೀರದ ನಿಯಮದ ಪ್ರಕಾರ ಒಂದು ವರ್ಷ ನಿರಂತರವಾಗಿ ಪ್ರಕಟವಾಗಿರುವ ದಿನಪತ್ರಿಕೆ ಸರ್ಕಾರಿ ಜಾಹೀರಾತು ಪಡೆಯಲು ಅರ್ಹ ಎಂದಿದೆ. ಆದರೆ ಜಾಹೀರಾತು ಪಡೆಯಲು ಕನಿಷ್ಠ ಇಷ್ಟು ಪ್ರತಿಗಳನ್ನು ಮುದ್ರಿಸಬೇಕೆನ್ನುವ ಯಾವುದೇ ನಿಯಮ ಇಲ್ಲ.

"ಮಾಹಿತಿ ಸಚಿವಾಲಯದ ಬದಲಾದ ನೀತಿಯ ಪ್ರಕಾರ ಮೂರು ವರ್ಷಗಳ ಕಾಲ ನಿರಂತರ ಪ್ರಕಟಣೆ ಮತ್ತು ಕನಿಷ್ಠ ೧೦೦೦ ಕೊಂಡು ಮಾರಾಟವಾಗುವ ಪ್ರತಿಗಳ ನಿಯಮ ಇದೆ" ಎನ್ನುತ್ತಾರೆ ಈ ಅಧಿಕಾರಿ.

ಸರ್ಕಾರಿ ಜಾಹಿರಾತಿಗಾಗಿ ಪ್ರತಿ ವರ್ಷ ೨೨ ಕೋಟಿ ಮೀಸಲಿದ್ದು ಅದರಲ್ಲಿ ಕೇವಲ ೧೦ ಕೋಟಿ ಮಾತ್ರ ಖರ್ಚಾಗುತ್ತದಂತೆ. "೧೦ ಕೋಟಿಯನ್ನು ಸರಿಯಾಗಿ ಪ್ರಸಾರವಾಗುವ ದಿನಪತ್ರಿಕೆಗಳಲ್ಲಿ ಜಾಹಿರಾತಿಗಾಗಿ ಬಳಸಲಾಗುತ್ತಿದೆ ಮತ್ತು ಇನ್ನುಳಿದ ಮೊತ್ತವನ್ನು ಪ್ರಸಾರಣೆ ಇಲ್ಲದ ದಿನಪತ್ರಿಕೆಗಳಿಗೂ ಜಾಹೀರಾತು ನೀಡುವ ಮೂಲಕ ಖರ್ಚು ಮಾಡಲಾಗುತ್ತದೆ. ಈ ಹಿಂದೆ ಕನಿಷ್ಠ ಮುದ್ರಣ ಪ್ರತಿಗಳ ಮೇಲೆ ನಿರ್ಭಂಧ ಇಲ್ಲದಿದ್ದರಿಂದ ನಾವು ಯಾರಿಗೂ ಜಾಹಿರಾತು ನಿರಾಕರಿಸುವಂತಿರಲಿಲ್ಲ" ಎಂದು ಕೂಡ ಅಧಿಕಾರಿ ಹೇಳುತ್ತಾರೆ.

ಹೀಗೆ ನಾಯಿಕೊಡೆಯಂತೆ ಏಳುತ್ತಿರುವ ಎಷ್ಟೋ ದಿನಪತ್ರಿಕೆಗಳಿಗೆ ಕಚೇರಿ ಕೂಡ ಇಲ್ಲ. "ಎಷ್ಟೋ ಕಡೆ ಕೇವಲ ಒಬ್ಬ ಕಂಪ್ಯೂಟರ್ ಕಲಿತವ ಐದಾರು ದಿನಪತ್ರಿಕೆಗಳಿಗೆ ಕೆಲಸ ಮಾಡುತ್ತಾನೆ. ಅಂತರ್ಜಾಲ ತೆರದು ಸುದ್ದಿಗಳನ್ನು ಹುಡುಕಿ ನಕಲು ಮಾಡುವದಷ್ಟೇ ಅವನ ಕೆಲಸ" ಎಂದು ಹೆಸರು ಹೇಳು ಬಯಸದ ಕಂಪ್ಯೂಟರ್ ಆಪರೇಟರ್ ಒಬ್ಬ ವಿವರಿಸುತ್ತಾನೆ.

ಈಗ ಹೊಸ ನಿಯಮಗಳು ಜಾರಿಯಾದ ಮೇಲಾದರೂ ಈ ಮಾಧ್ಯಮ ಮಲೇರಿಯಾ ನಿಯಂತ್ರಣಕ್ಕೆ ಬರುವುದೇ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com