ಭಾರತದ ಆಹಾರ ನೀತಿಗಳನ್ನು ಬಲಗೊಳಿಸಬೇಕಿದೆ: ಎಚ್ ಎಲ್ ದತ್ತು

ದೇಶದ ಆಹಾರ ನೀತಿಗಳನ್ನು ಬಲಗೊಳಿಸಬೇಕಿದೆ ಎಂದಿದ್ದಾರೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ ಎಚ್ ಆರ್ ಸಿ) ಅಧ್ಯಕ್ಷ ಎಚ್ ಎಲ್ ದತ್ತು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ ಎಚ್ ಆರ್ ಸಿ) ಅಧ್ಯಕ್ಷ ಎಚ್ ಎಲ್ ದತ್ತು
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ ಎಚ್ ಆರ್ ಸಿ) ಅಧ್ಯಕ್ಷ ಎಚ್ ಎಲ್ ದತ್ತು

ನವದೆಹಲಿ: ದೇಶದ ಆಹಾರ ನೀತಿಗಳನ್ನು ಬಲಗೊಳಿಸಬೇಕಿದೆ ಎಂದಿದ್ದಾರೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ ಎಚ್ ಆರ್ ಸಿ) ಅಧ್ಯಕ್ಷ ಎಚ್ ಎಲ್ ದತ್ತು.

"ಅಂತೋದಯ ಯೋಜನಾ ಮತ್ತಿತರ ಹಲವಾರು ಆಹಾರ ಯೋಜನೆಗಳು ನಮ್ಮಲ್ಲಿವೆ. ಆಹಾರ ಸಂಬಂಧಿ ನೀತಿಗಳು ಮತ್ತು ಯೋಜನೆಗಳಿಗೆ ಕಡಿಮೆಯೇನಿಲ್ಲ ಆದರೆ ಈ ಯೋಜನೆಗಳು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಬೇಕು" ಎಂದು ದತ್ತು ಹೇಳಿದ್ದಾರೆ.

ಎನ್ ಎಚ್ ಆರ್ ಸಿ ಆಯೋಜಿಸಿದ್ದ ಆಹಾರ ಹಕ್ಕು ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಆಹಾರದ ವಿಷಯವಾಗಿ ಅಧಿಕಾರಿಗಳನ್ನು ಮತ್ತು ಕಮಿಷನರ್ ಗಳನ್ನು ನೇಮಿಸಲು ಸುಪ್ರೀಂ ಕೋರ್ಟ್ ತಿಳಿಸಿತ್ತು ಆದುದರಿಂದ ಪರಿಸ್ಥಿತಿ ಉತ್ತಮಗೊಂಡಿದೆ ಮತ್ತು ಹಲವು ರಾಜ್ಯಗಳಲ್ಲಿ ಆಹಾರ ಹಕ್ಕುಗಳ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕೂಡ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com