ಅಸಾರಾಮ್ ಬಾಪು ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್

ಸ್ವಘೋಷಿತ ದೇವಮಾನವ- ರೇಪ್ ಆಪಾದಿತ ಅಸಾರಾಮ್ ಬಾಪುವಿನ ಜಾಮೀನು ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ವಜಾ ಮಾಡಿದೆ.
ರೇಪ್ ಆಪಾದಿತ ಅಸಾರಾಮ್ ಬಾಪು
ರೇಪ್ ಆಪಾದಿತ ಅಸಾರಾಮ್ ಬಾಪು
ಜೋದ್ಪುರ್: ಸ್ವಘೋಷಿತ ದೇವಮಾನವ- ರೇಪ್ ಆಪಾದಿತ ಅಸಾರಾಮ್ ಬಾಪುವಿನ ಜಾಮೀನು ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ವಜಾ ಮಾಡಿದೆ. 
ಅಸಾರಾಮ್ ಬಾಪುವಿಗೆ ಜಾಮೀನು ಅರ್ಜಿ ನಿರಾಕರಿಸಿರುವುದು ಇದು ಒಂಭತ್ತನೇ ಬಾರಿ. ಕಳೆದ ತಿಂಗಳು ಹೈಕೋರ್ಟ್ ಮಧ್ಯಂತರ ಜಾಮೀನು ಅರ್ಜಿಯನ್ನು ಕೂಡ ವಜಾಗೊಳಿಸಿತ್ತು. 
ಜಾಮೀನು ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ ನ್ಯಾಯಾಧೀಶ ನಿರ್ಮಲ್ ಜೀತ್ ಕೌರ್, ಸದ್ಯಕ್ಕೆ ಈ ಪ್ರಕರಣದ ವಿಚಾರಣೆ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಜಾಮೀನು ನೀಡುವುದು ಸಮರ್ಪಕವಲ್ಲ ಎಂದಿದ್ದಾರೆ.
ಈ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಆಪಾದಿತನ ಪರ ವಕೀಲರ ವಾದವನ್ನು ಕೂಡ ಕೋರ್ಟ್ ನಿರಾಕರಿಸಿತು ಎಂದು ಪ್ರಾಸೆಕ್ಯೂಶನ್ ವಕೀಲ ಪಿ ಸಿ ಸೋಲಂಕಿ ಹೇಳಿದ್ದಾರೆ. 
ಜೋದ್ಪುರದ ಹತ್ತಿರವಿರುವ ಮಾನೈ ಗ್ರಾಮದ ಆಶ್ರಮದಲ್ಲಿ ಈ ದೇವಮಾನವ ತಮಗೆ ಲೈಂಕಿಕ ಕಿರುಕುಳ ನೀಡಿದ್ದಾಗಿ ಬಾಲಕಿಯೊಬ್ಬರು ಆರೋಪಿಸಿದ್ದರು. ಉತ್ತರಪ್ರದೇಶದ ಶಹಜಾನ್ಪುರ ಮೂಲದ ಈ ಬಾಲಕಿ ಈ ಆಶ್ರಮದ ವಿದ್ಯಾರ್ಥಿನಿಯಾಗಿದ್ದರು. 
ಆಶ್ರಮದ ವಿರುದ್ಧ ಬಾಲಕಿ ನೀಡಿದ್ದ ದೂರಿನ ಮೇರೆಗೆ ಅಸಾರಾಮ್ ಬಾಪುವನ್ನು ಜೋಧಪುರ ಪೊಲೀಸರು 31, ಆಗಸ್ಟ್ 2013 ರಲ್ಲಿ ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com