ಜಾಡಮಾಲಿಗಳ ಬಗ್ಗೆ ಮರು ಸಮೀಕ್ಷೆ ನಡೆಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಜಾಡಮಾಲಿಗಳ ಬಗ್ಗೆ ಮರು ಸಮೀಕ್ಷೆ ಮಾಡುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜಾಡಮಾಲಿಗಳ ಬಗ್ಗೆ ಮರು ಸಮೀಕ್ಷೆ ಮಾಡುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. 
ನೆನ್ನೆ ನವದೆಹಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಾಮಾಜಿಕ ನ್ಯಾಯ ಸಚಿವಾಲಯ ಕಾರ್ಯದರ್ಶಿ ಅನಿತಾ ಅಗ್ನಿಹೋತ್ರಿ, ದೇಶದಾದ್ಯಂತ 12 ಸಾವಿರಕ್ಕೂ ಕಡಿಮೆ ಜಾಡಮಾಲಿಗಳಿದ್ದಾರೆ ಎಂದು ಗುರುತಿಸಲಾಗಿದೆ ಅದರಲ್ಲಿ ಉತ್ತರಪ್ರದೇಶದಲ್ಲೇ 10 ಸಾವಿರ ಜಾಡಮಾಲಿಗಳಿದ್ದಾರೆ. 
"ಆದರೆ ಜಾಡಮಾಲಿ (ಮಲ ಹೊರುವ) ಪದ್ಧತಿಯನ್ನು ಅನುಸರಿಸುತ್ತಿರುವವರ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ" ಎಂದು ಅವರು ಹೇಳಿದ್ದಾರೆ. 
ಸಚಿವಾಲಯ ದೇಶದಾದ್ಯಂತ 2.5 ಲಕ್ಷಕ್ಕೂ ಹೆಚ್ಚು ಜಾಡಮಾಲಿಗಳಿರುವುದನ್ನು ಅಂದಾಜಿಸಿದೆ ಮತ್ತು ಕೇವಲ 10 ರಿಂದ 12 ರಾಜ್ಯಗಳು ಸುಮಾರು 12 ಸಾವಿರ ಜಾಡಮಾಲಿಗಳ ಬಗ್ಗೆ ವಿವರಗಳನ್ನು ಕಳುಹಿಸಿವೆ ಎಂದು ಅವರು ತಿಳಿಸಿದ್ದಾರೆ. 
ಈ ಜಾಡಮಾಲಿ ಕೆಲಸವನ್ನು ತೊರೆಯುವವರಿಗೆ ಸಚಿವಾಲಯ ಈಗಾಗಲೇ 40000 ರು ಧನ ಸಹಾಯ ಮಾಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com