ಅಸಾರಾಂ ಬಾಪುವಿಗೆ ಮಧ್ಯಂತರ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ರೇಪ್ ನತ್ತು ಕೊಲೆ ಆರೋಪದಲ್ಲಿ ಬಂಧಿತನಾಗಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪುವಿಗೆ, ಮಧ್ಯಂತರ ಜಾಮೀನು ನೀಡಲು ಗುರುವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪೊಲೀಸ್ ಬಂಧನದಲ್ಲಿ ಅಸಾರಾಂ ಬಾಪು
ಪೊಲೀಸ್ ಬಂಧನದಲ್ಲಿ ಅಸಾರಾಂ ಬಾಪು

ನವದೆಹಲಿ: ರೇಪ್ ನತ್ತು ಕೊಲೆ ಆರೋಪದಲ್ಲಿ ಬಂಧಿತನಾಗಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪುವಿಗೆ, ಮಧ್ಯಂತರ ಜಾಮೀನು ನೀಡಲು ಗುರುವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅನಾರೋಗ್ಯದ ಕಾರಣಗಳಿಂದ ಆರೋಪಿ ಮಧ್ಯಂತರ ಜಾಮೀನಿಗೆ ಅರ್ಜಿ ಹಾಕಿದ್ದರು.

ಅಸಾರಾಂ ಬಾಪು ಆರೋಪಿಸಿರುವ ಖಾಯಿಲೆಗಳ ಬಗ್ಗೆ ಪರಿಶೀಲಿಸಲು ಮೂರು ಸದಸ್ಯರ ವೈದ್ಯಕೀಯ ತಂಡ ರಚಿಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್) ಕೋರ್ಟ್ ಸೂಚಿಸಿದೆ.

ಅಸಾರಾಂನ ಜಾಮೀನು ಅರ್ಜಿ ವಗಾಗೊಳಿಸಿದ್ದ ರಾಜಸ್ಥಾನ ಹೈಕೋರ್ಟ್ ನ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ನಿರಾಕರಿಸಿದ ನ್ಯಾಯಾಧೀಶ ಮದನ್ ಬಿ ಲೋಕೂರ್ ಮತ್ತು ನ್ಯಾಯಾಧೀಶ ಆರ್ ಕೆ ಅಗರವಾಲ್ ಒಳಗೊಂಡ ನ್ಯಾಯಪೀಠ, ಏಮ್ಸ್ ನಿರ್ದೇಶಕರಿಗೆ ಆರೋಪಿಯ ಅನಾರೋಗ್ಯದ ಬಗ್ಗೆ ಪರಿಶೀಲಿಸಲು ಮೂರು ಸದಸ್ಯರ ವೈದ್ಯಕೀಯ ತಂಡ ರಚಿಸುವಂತೆ ಸೂಚಿಸಿದೆ.

10 ದಿನಗಳ ಒಳಗೆ ವರದಿ ನೀಡಿ ಎಂದು ಸೂಚಿಸಿರುವ ಕೋರ್ಟ್, ಪಂಚಕರ್ಮ ಆಯುರ್ವೇದ ಚಿಕಿತ್ಸೆಗೆ ತೆರಳಲು ಒಂದು ತಿಂಗಳ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಹೈಕೋರ್ಟ್ ಆದೇಶ ಸ್ವಘೋಷಿತ ದೇವಮಾನವನ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿರಲಿಲ್ಲ ಎಂದಿದ್ದ ಆರೋಪಿ ಪರ ವಕೀಲ ರಾಜು ರಾಮಚಂದ್ರನ್, ಮೂತ್ರ ಮತ್ತು ಮಲ ವಿಸರ್ಜನೆಯಲ್ಲಿ ನಿಯಂತ್ರಣ ಕಳೆದುಕೊಂಡಿರುವ ತಮ್ಮ ಕಕ್ಷಿದಾರ ಹಾಸಿಗೆಯಲ್ಲೇ ವಿಸರ್ಜನೆ ಮಾಡಿಕೊಳ್ಳುತ್ತಿರುವುದಾಗಿ ಜೈಲಿನ ವೈದ್ಯರು ಹೇಳಿದ್ದಾರೆ ಎಂದು ಅಪೆಕ್ಸ್ ಕೋರ್ಟ್ ನಲ್ಲಿ ವಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com