ಕೌಟುಂಬಿಕ ದೌರ್ಜನ್ಯ ಪ್ರಕರಣ: ಸಿಲಿಕಾನ್ ವ್ಯಾಲಿ ಉದ್ಯಮಿ ಗುರಭಕ್ಷ್ ಚಾಹಲ್ ಗೆ ಒಂದು ವರ್ಷ ಜೈಲು ಶಿಕ್ಷೆ

ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಸಿಲಿಕಾನ್ ವ್ಯಾಲಿಯ ಇಂಟರ್ ನೆಟ್ ಉದ್ಯಮಿ ಗುರ್ಭಕ್ಷ್ ಚಾಹಲ್ ಗೆ ಸ್ಯಾನ್ ಫ್ರಾನ್ಸಿಸ್ಕೋ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಗುರ್ಭಕ್ಷ್ ಚಾಹಲ್
ಗುರ್ಭಕ್ಷ್ ಚಾಹಲ್

ಸ್ಯಾನ್ ಫ್ರಾನ್ಸಿಸ್ಕೋ: ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಸಿಲಿಕಾನ್ ವ್ಯಾಲಿಯ ಇಂಟರ್ ನೆಟ್ ಉದ್ಯಮಿ ಗುರ್ಭಕ್ಷ್ ಚಾಹಲ್ ಗೆ ಸ್ಯಾನ್ ಫ್ರಾನ್ಸಿಸ್ಕೋ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

ಗೆಳತಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದ ಗುರಭಕ್ಷ್ ಚಾಹಲ್ ದೌರ್ಜನ್ಯ ಪ್ರಕರಣದಲ್ಲಿ ಪರೀಕ್ಷಣಾವಧಿಯನ್ನು ರದ್ದು ಮಾಡಿ ಸ್ಯಾನ್ ಫ್ರಾನ್ಸಿಸ್ಕೋ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕಿರಿಯ ವಯಸ್ಸಿನಲ್ಲೇ ತನ್ನ ಸ್ಟಾರ್ಟ್ ಅಪ್ ನ್ನು 300 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಿ, ದಿ ಒಪ್ರಾಹ್ ವಿನ್‌ಫ್ರೇ ಶೋ ನಲ್ಲಿ ಕಾಣಿಸಿಕೊಂಡಿದ್ದ ಗುರಭಕ್ಷ್ ಚಾಹಲ್ ವಿರುದ್ಧ ಪ್ರೇಯಸಿಯ ಮೇಲೆ ದೌರ್ಜನ್ಯ ಮಾಡಿರುವ ಆರೋಪ ಹಾಗೂ ಉಸಿರುಗಟ್ಟಿಸಲು ಯತ್ನಿಸಿದ್ದ ಆರೋಪ ಕೇಳಿಬಂದಿತ್ತು.

2014 ರಲ್ಲಿ ಗುರಭಕ್ಷ್ ಚಾಹಲ್ ವಿರುದ್ಧದ ಆರೋಪ ಸಾಬೀತಾಗಿತ್ತಾದರೂ ವಿಡಿಯೋ ಫುಟೇಜ್ ನ್ನು ಪರಿಗಣಿಸಿರುವುದಕ್ಕೆ ಗುರಭಕ್ಷ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವಾಗಿ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾಗಿದ್ದ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಹಕರಿಸಲು ನಿಲ್ಲಿಸಿದ್ದರು. ಈ ಬೆಳವಣಿಗೆ ನಂತರ  ಗುರಭಕ್ಷ್  ವಿರುದ್ಧದ ಪ್ರಕರಣದಲ್ಲಿ ವಿಡಿಯೋ ಫುಟೇಜ್ ನ್ನು ಅನುಚಿತ ಪಡೆಯಾಗಿರುವ ಹಿನ್ನೆಲೆಯಲ್ಲಿ ವಿಡಿಯೋ ಫುಟೇಜ್ ನ್ನು ಸಾಕ್ಷ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದರು. ಅಷ್ಟೇ ಅಲ್ಲದೆ, ತಪ್ಪಿತಸ್ಥ ಎಂದು ಸಾಬೀತಾಗಿದ್ದರೂ ಜೈಲು ಶಿಕ್ಷೆ ವಿಧಿಸದೆ ಪರೀಕ್ಷಣಾವಧಿಯಲ್ಲಿರಿಸಲಾಗಿತ್ತು.

ಈ ಮಧ್ಯೆ ಗುರಭಕ್ಷ್ 2014 ರಲ್ಲಿ ಮತ್ತೋರ್ವ ಮಹಿಳೆ ಮೇಲೆ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದ್ದು, ನ್ಯಾಯಾಧೀಶರು ಆತನ ಪರೀಕ್ಷಣಾವಧಿಯನ್ನು ರದ್ದುಗೊಳಿಸಿ ಜೈಲು ಶಿಕ್ಷೆ ವಿಧಿಸಲು ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದು ಹೇಳಿದ್ದು  ಈಗ ಗುರ್ಭಕ್ಷ್ ಚಾಹಲ್ ಗೆ ಸ್ಯಾನ್ ಫ್ರಾನ್ಸಿಸ್ಕೋ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com