ಜೈಶಾ ಮ್ಯಾರಥಾನ್ ವಿವಾದ; ವಿಜಯ್ ಗೋಯೆಲ್ ರಾಜಿನಾಮೆಗೆ ಎನ್ ಸಿ ಪಿ ಆಗ್ರಹ

ಮ್ಯಾರಥಾನ್ ಓಟಗಾರ್ತಿ ಓ ಪಿ ಜೈಶಾ ಅವರನ್ನು ಬ್ರೆಜಿಲ್ ನ ರಿಯೋ ಒಲಂಪಿಕ್ಸ್ ನಲ್ಲಿ ನೋಡಿಕೊಂಡ ರೀತಿ ನಾಚಿಕೆಗೇಡು ಎಂದಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿ ಪಿ), ಕೂಡಲೇ ಕ್ರೀಡಾ ಮತ್ತು ಯುವ
ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಗೋಯೆಲ್
ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಗೋಯೆಲ್
ನವದೆಹಲಿ: ಮ್ಯಾರಥಾನ್ ಓಟಗಾರ್ತಿ ಓ ಪಿ ಜೈಶಾ ಅವರನ್ನು ಬ್ರೆಜಿಲ್ ನ ರಿಯೋ ಒಲಂಪಿಕ್ಸ್ ನಲ್ಲಿ ನೋಡಿಕೊಂಡ ರೀತಿ ನಾಚಿಕೆಗೇಡು ಎಂದಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿ ಪಿ), ಕೂಡಲೇ ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಗೋಯೆಲ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ. 
"ಇದು ನಮಗೆ ನಾಚಿಕೆಗೇಡಿನ ಸಂಗತಿ ಅಲ್ಲವೇ? ವಿಶ್ವ ಮಟ್ಟದಲ್ಲಿ ನಮ್ಮನ್ನು ಪ್ರತಿನಿಧಿಸುವ ಆಟಗಾರರು ಚಿನ್ನ ಗೆದೆಯಬೇಕೆಂದು ನಿರೀಕ್ಷಿಸುತ್ತೇವೆ ಆದರೆ ಅವರಿಗೆ ನೀರು ಕೂಡ ಕೊಡುವುದಿಲ್ಲ- ಈ ಸಂಗತಿಯಿಂದ ನಾವು ತಲೆತಗ್ಗಿಸಬಾರದೇ? ಆಡಳಿತ ಇಷ್ಟು ಬೇಜವಾಬ್ದಾರಿ ಮತ್ತು ಅಸೂಕ್ಷ್ಮತೆಯಿಂದ ಹೇಗೆ ನಡೆದುಕೊಳ್ಳಬಹುದೋ ತಿಳಿಯುತ್ತಿಲ್ಲ. ಕ್ರೀಡಾ ಸಚಿವ ರಾಜೀನಾಮೆ ನೀಡುವುದರಿಂದ ಇದಕ್ಕೆ ಸಣ್ಣ ಮಟ್ಟದ ಪರಿಹಾರ ಸಿಗುತ್ತದೆ ಎಂದು" ಎನ್ ಸಿ ಪಿ ಮುಖಂಡ ಮಜೀದ್ ಮೆಮನ್ ಹೇಳಿದ್ದಾರೆ. 
ರಿಯೋ ಒಲಂಪಿಕ್ಸ್ ನಲ್ಲಿ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಜೈಶಾ, ಅಲ್ಲಲ್ಲಿ ನೀರು ಒದಗಿಸಬೇಕಿದ್ದ ಭಾರತದ ಮೇಜುಗಳಲ್ಲಿ ಯಾರು ಇರದಿದ್ದನ್ನು ಕಂಡು ಆಘಾತರಾಗಿ ಬಳಲಿದ್ದರು. 
"ಅಷ್ಟು ದೂರ ಆ ಬಿಸಿಲಿನಲ್ಲಿ ನಡೆಯುವುದಕ್ಕೆ ನಿಮಗೆ ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಪ್ರತಿ 8 ಕಿಲೋ ಮೀಟರ್ ಗೆ ಸಾಮಾನ್ಯ ನೀರು ತಾಣಗಳಿರುತ್ತವೆ. ಆದರೆ ಪ್ರತಿ ಕಿಲೋಮೀಟರ್ ಗೆ ಬಳಲಿಕೆಯಾಗಿ ನೀರು ಕುಡಿಯಬೇಕೆನ್ನಿಸುತ್ತದೆ. ಇತರ ಅಥ್ಲೀಟ್ ಗಳಿಗೆ ಆಹಾರ ಮತ್ತು ನೀರು ಕೊಡಲಾಗುತ್ತಿತ್ತು. ನನಗೆ ಏನು ಸಿಗಲಿಲ್ಲ. ನನಗೆ ಅಲ್ಲಿ ಸಾವಿನ ಅಪಾಯವಿತ್ತು" ಎಂದು ಜೈಶಾ ಹೇಳಿದ್ದರು. 
ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ದೇಶಗಳು ಪ್ರತಿ 2 ವರೆ ಕಿಲೋಮೀಟರ್ ದೂರದಲ್ಲಿ, ಕ್ರೀಡಾಪಟುಗಳಿಗೆ ದ್ರವ್ಯ ವಸ್ತುಗಳನ್ನು ನೀಡಬಹುದು. ಒಲಂಪಿಕ್ಸ್ ಕೌಂಟರ್ ಗಳು ಪ್ರತಿ 8 ಕಿಲೋ ಮೀಟರ್ ಗೆ ಒಂದು ಇರುತ್ತವೆ. 
ಮ್ಯಾರಥಾನ್ ಓಟವನ್ನು 2:47:19 ಸಮಯದಲ್ಲಿ ಮುಗಿಸಿದ್ದ ಜೈಶಾ 89 ಸ್ಥಾನದಲ್ಲಿದ್ದರು ಮತ್ತು ಮ್ಯಾರಥಾನ್ ಮುಗಿಸಿದ ತಕ್ಷಣ ಕುಸಿದು ಬಿದ್ದಿದ್ದರು. ಆಗ ಅವರನ್ನು ಹತ್ತಿರದ ವೈದ್ಯಕೀಯ ಸೇವೆಗೆ ಕರೆದೊಯ್ಯಲಾಗಿತ್ತು. ನಂತರ ಅವರ ತರಬೇತುದಾರ ವೈದ್ಯರ ಬಳಿ ವಾದಕ್ಕೆ ಇಳಿದಿದ್ದರಿಂದ ಅರ್ಧ ದಿನ ಪ್ರಾದೇಶಿಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com